ಬೆಂಗಳೂರು: ಟ್ವಿಟರ್ ಇಂಡಿಯಾ ಎಂಡಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ಕೊಟ್ಟಿದ್ದು ಅವರ ವಿರುದ್ಧ ಉತ್ತರಪ್ರದೇಶದ ಗಾಜಿಯಾಪುರ ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶವನ್ನ ಹೊರಡಿಸಿದೆ.

ಯುಪಿ ಪೊಲೀಸರ ನೋಟಿಸ್ ರದ್ದುಪಡಿಸಲು ಮನೀಶ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಮನವಿ ಮಾಡಿದ್ದರು. ಮನೀಶ್ ಟ್ವಿಟರ್ ಆಡಳಿತ ಮಂಡಳಿ ಸದಸ್ಯರಲ್ಲ. ಮಾರ್ಕೆಟಿಂಗ್, ಸೇಲ್ಸ್ ಮಾತ್ರ ನೋಡಿಕೊಳ್ಳುತ್ತಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಸಿದ್ಧರಿದ್ದಾರೆ ಎಂದು ಹೈಕೋರ್ಟ್​ಗೆ ವಕೀಲರು ಹೇಳಿಕೆ ನೀಡಿದ್ದಾರೆ.

ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ.. ಮನೀಶ್ ವಿಚಾರಣೆಗೆ ಮುನ್ನ ದಿನಾಂಕ ಹಾಗೂ ಸಮಯ ತಿಳಿಸಬೇಕು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬೇಕು. ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸೂಚನೆ ನೀಡಿದೆ. ಸದ್ಯ ವಿಚಾರಣೆಯನ್ನ ಜೂ. 29ಕ್ಕೆ ಮುಂದೂಡಲಾಗಿದೆ.

The post ಟ್ವಿಟರ್​ ಇಂಡಿಯಾ MDಗೆ ರಿಲೀಫ್: ಯುಪಿ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಹೇಳಿದ್ದೇನು..? appeared first on News First Kannada.

Source: newsfirstlive.com

Source link