ನವದೆಹಲಿ: ‘ಗ್ರಾಹಕ ಗುಪ್ತಚರ ಸಂಸ್ಥೆ ಬ್ರಾಂಡ್ ವಾಚ್’ ವಾರ್ಷಿಕ ಸಂಶೋಧನೆಯ ಆಧಾರದ ಮೇಲೆ ಟ್ವಿಟರ್‌ನಲ್ಲಿ 50 ಪ್ರಭಾವಿ ವ್ಯಕ್ತಿಗಳ ಪಟ್ಟಿಯೊಂದನ್ನ ಸಿದ್ಧಪಡಿಸಿದ್ದು ಇದರಲ್ಲಿ ಪ್ರಧಾನಿ ಮೋದಿ ಎರಡನೇ ಸ್ಥಾನ ಪಡೆದು ಮತ್ತೊಮ್ಮೆ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.
ಅಮೆರಿಕದ ಗಾಯಕಿ ಟೇಲರ್ ಸ್ವಿಫ್ಟ್ ಮೊದಲ ಸ್ಥಾನ ಪಡೆದಿದ್ದಾರೆ. ಇನ್ನು ಇದೇ ಲಿಸ್ಟ್ನಲ್ಲಿ ಖ್ಯಾತ WWE ರಸ್ಲರ್ ಹಾಗೂ ನಟ ರಾಕ್ ಮತ್ತು ನಟ ಲಿಯೋನಾರ್ಡೋ ಡಿಕಾಪ್ರಿಯೋರನ್ನ ಹಿಂದಿಕ್ಕಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡ್ಕೂಲರ್ 35ನೇ ಸ್ಥಾನದಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಹೆಸರು ಸೇರಿದೆ. ಕುತೂಹಲ ಏನೆಂದರೆ ಸಚಿನ್ ಅಮೆರಿಕದ ನಟ ಡ್ವೇನ್ ಜಾನ್ಸನ್, ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ಯುಎಸ್ ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನು ಹಿಂದಿಕ್ಕಿದ್ದಾರೆ.