ಬೆಂಗಳೂರು: ಅನ್ಯಕೋಮಿನ ವೃದ್ಧ ವ್ಯಕ್ತಿಯೋರ್ವರ ಮೇಲಿನ ಹಲ್ಲೆ ವಿಡಿಯೋ ಟ್ವಿಟರ್​ನಲ್ಲಿ ವೈರಲ್ ಆದ ಹಿನ್ನೆಲೆ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಟ್ವಿಟರ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮನೀಶ್ ಮಹೇಶ್ವರಿ ಅವರಿಗೆ ಜೂನ್ 21 ರಂದು ನೋಟಿಸ್ ನೀಡಿ ಇಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಸಿಆರ್​ಪಿಸಿ ಸೆಕ್ಷನ್ 41ಎ ಅಡಿ ನೋಟಿಸ್ ನೀಡಲಾಗಿತ್ತು.

ಗಾಜಿಯಾಬಾದ್ ಪೊಲೀಸರು ನೋಟಿಸ್ ನೀಡಿದ್ದನ್ನ ಪ್ರಶ್ನಿಸಿ ಮನೀಶ್ ಮಹೇಶ್ವರಿ ಕರ್ನಾಟಕ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಮನೀಶ್ ಮಹೇಶ್ವರಿ ಅವರಿಗೆ ಮಧ್ಯಂತರ ರಿಲೀಫ್ ನೀಡಿದೆ. ಅಲ್ಲದೇ ಮನೀಶ್ ಮಹೇಶ್ವರಿ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಗಾಜಿಯಾಬಾದ್ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದೆ.

The post ಟ್ವಿಟರ್ ಇಂಡಿಯಾ MDಗೆ ರಿಲೀಫ್​ ಕೊಟ್ಟ ಕರ್ನಾಟಕ ಹೈಕೋರ್ಟ್: ಏನಿದು ಪ್ರಕರಣ..? appeared first on News First Kannada.

Source: newsfirstlive.com

Source link