ಹಾರ್ದಿಕ್ ಪಟೇಲ್
ದೆಹಲಿ: ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ವಿರುದ್ಧ ಟೀಕಾಪ್ರಹಾರ ಮಾಡಿದ್ದ ಗುಜರಾತ್ ಕಾಂಗ್ರೆಸ್ ಘಟಕದ ನಾಯಕ ಹಾರ್ದಿಕ್ ಪಟೇಲ್ ಇದೀಗ ತಮ್ಮ ಟ್ವಿಟರ್ ಖಾತೆಯ ವೈಯಕ್ತಿಕ ಮಾಹಿತಿ ವಿಭಾಗದಲ್ಲಿ ಪಕ್ಷದ ಹೆಸರನ್ನು ತೆಗೆದು ಹಾಕಿದ್ದಾರೆ. ಪಕ್ಷವು ತಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಈ ಹಿಂದೆ ಹೇಳಿದ್ದ ಪಟೇಲ್, ಟ್ವಿಟರ್ ಬಯೋದಿಂದ ‘ಕಾಂಗ್ರೆಸ್’ ಅಳಿಸಿ ಹಾಕುವ ಮೂಲಕ ಮುಂದಿನ ನಡೆ ಬಗ್ಗೆ ಕುತೂಹಲ ಸೃಷ್ಟಿಸಿದ್ದಾರೆ. ಏಪ್ರಿಲ್ 13 ರಂದು ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷರು ತಮ್ಮ ಸ್ವಂತ ಪಕ್ಷವನ್ನು ಟೀಕಿಸುತ್ತಾ, ನನ್ನನ್ನು ದೂರವಿಡಲಾಗುತ್ತಿದೆ. ಪಕ್ಷದ ನಾಯಕತ್ವವು ನನ್ನ ಕೌಶಲ್ಯವನ್ನು ಬಳಸಿಕೊಳ್ಳಲು ಸಿದ್ಧವಾಗಿಲ್ಲ ಎಂದು ಹೇಳಿದ್ದರು. “ನನ್ನನ್ನು ಪಿಸಿಸಿಯ ಯಾವುದೇ ಸಭೆಗಳಿಗೆ ಆಹ್ವಾನಿಸಲಾಗಿಲ್ಲ, ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನನ್ನನ್ನು ಸಂಪರ್ಕಿಸುವುದಿಲ್ಲ; ಹಾಗಾದರೆ ಈ ಹುದ್ದೆಯ ಅರ್ಥವೇನು” ಎಂದು ಅವರು ಕೇಳಿದ್ದರು.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)