ಟ್ವಿಟರ್ ಪ್ರೊಫೈಲ್​​​ನಿಂದ ಪತಿ ಹೆಸರು ಕೈ ಬಿಟ್ಟ ಪ್ರಿಯಾಂಕಾ -ವಿಚ್ಛೇದನ ರೂಮರ್ಸ್​​​ಗೆ ಪಿಗ್ಗಿ ಹೇಳಿದ್ದೇನು?

ಬಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ, ಪಾಕ್​ ಸಿಂಗರ್​ ನಿಕ್​​ ಜೋನಸ್ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಪ್ರಿಯಾಂಕಾ ತಮ್ಮ ಟ್ವಿಟರ್ ಖಾತೆಯಿಂದ ಪತಿಯ ಹೆಸರನ್ನು ಕೈ ಬಿಟ್ಟಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸದ್ಯ ಪ್ರಿಯಾಂಕಾ ತಮ್ಮ ಹೆಸರನ್ನು ಮಾತ್ರ ಪ್ರೊಫೈಲ್​ನಲ್ಲಿ ಉಳಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಅಗುತ್ತಿದ್ದ ಸುದ್ದಿಗಳ ಕುರಿತು ಪ್ರತಿಕ್ರಿಯೆ ನೀಡಿರೋ ಪ್ರಿಯಾಂಕಾ ತಾಯಿ ಮಧು ಚೋಪ್ರಾ, ಈ ಸುದ್ದಿಗಳು ಕೇವಲ ರೂಮರ್ಸ್​​ ಮಾತ್ರ ಎಂದಿದ್ದಾರೆ. ಅಲ್ಲದೇ ಪ್ರಿಯಾಂಕಾರ ಕೆಲ ಸ್ನೇಹಿತರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮುಂದಿನ ದಿನಗಳಲ್ಲಿ ಬರುವ ಸಿನಿಮಾ ಪ್ರಾಜೆಕ್ಟ್​​ಗಳಿಗಾಗಿ ಪ್ರಿಯಾಂಕಾ ತಮ್ಮ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಬದಲಿಸಿದ್ದಾರೆ. ಪ್ರಿಯಾಂಕಾ ತಮ್ಮ ಪ್ರೋಫೈಲ್​​​ನಲ್ಲಿ ಪತಿಯ ಹೆಸರು ಮಾತ್ರವಲ್ಲ, ಚೋಪ್ರಾ ಹೆಸರನ್ನು ಕೂಡ ತೆಗೆದಿದ್ದಾರೆ ಎಂದು ನೆನಪು ಮಾಡಿದ್ದಾರೆ.

ಟಾಲಿವುಡ್​ ಸ್ಟಾರ್ ನಟಿ ​ ಸಮಂತಾ, ನಾಗಚೈತನ್ಯರೊಂದಿಗೆ ವಿಚ್ಛೇದನ ಪಡೆಯೋ ಮುನ್ನ ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಪತಿಯ ಹೆಸರನ್ನು ಕೈ ಬಿಟ್ಟು ಅಭಿಮಾನಿಗಳಿಗೆ ಸುಳಿವು ನೀಡಿದ್ದರು. ಸದ್ಯ ಪ್ರಿಯಾಂಕ ಕೂಡ ಪತಿಯ ಹೆಸರನ್ನು ಕೈ ಬಿಟ್ಟ ಕಾರಣ ನೆಟ್ಟಿಗರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು.

News First Live Kannada

Leave a comment

Your email address will not be published. Required fields are marked *