ನವದೆಹಲಿ: ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ತಾಂತ್ರಿಕ ಸಮಸ್ಯೆ(ಲೋಡಿಂಗ್) ತಲೆದೋರಿದ ಪರಿಣಾಮ ಶುಕ್ರವಾರ(ಏಪ್ರಿಲ್ 16) ಸಂಜೆ ಸಾವಿರಾರು ಬಳಕೆದಾರರು ಸಮಸ್ಯೆ ಎದುರಿಸಿದ್ದರು. ಈ ಬಗ್ಗೆ ಬಳಕೆದಾರರು ವರದಿ ಮಾಡಿದ್ದು, ಸಮಸ್ಯೆ ಪರಿಹರಿಸಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.

“ನಿಮ್ಮಲ್ಲಿ ಕೆಲವರಿಗೆ ಟ್ವೀಟ್ ಲೋಡ್ ಆಗಲು ಸಮಸ್ಯೆ ಎದುರಿಸುತ್ತಿರಬಹುದು. ನಾವು ಆ ಸಮಸ್ಯೆಯನ್ನು ಪರಿಹರಿಸಲು ಕಾರ್ಯೋನ್ಮುಖರಾಗಿದ್ದೇವೆ. ನೀವು ಶೀಘ್ರವಾಗಿ ನಿಮ್ಮ ಟೈಮ್ ಲೈನ್ ನೊಳಗೆ ಟ್ವೀಟ್ ಮಾಡಬಹುದಾಗಿದೆ ಎಂದು ಟ್ವಿಟರ್ ತಿಳಿಸಿದೆ.

ಶುಕ್ರವಾರ ಸಾಮಾಜಿಕ ಜಾಲತಾಣವಾದ ಟ್ವೀಟರ್ ನ ಸುಮಾರು 40,000 ಬಳಕೆದಾರರು ಲೋಡಿಂಗ್ ಸಮಸ್ಯೆ ಬಗ್ಗೆ ವರದಿ ಮಾಡಿದ್ದರು ಎಂದು ಡೌನ್ ಡಿಟೆಕ್ಟರ್ ಡಾಟ್ ಕಾಮ್ ವಿವರಿಸಿದೆ.

ಸರಣಿಯಾಗಿ ಸಮಸ್ಯೆಗಳ ಕುರಿತು ಮಾಡಿದ ವರದಿಯನ್ನು ಡೌನ್ ಡಿಟೆಕ್ಟರ್ ಸಂಗ್ರಹಿಸುವ ಮೂಲಕ ಸಮಸ್ಯೆಯನ್ನು ಪತ್ತೆ ಹಚ್ಚಲು ಮುಂದಾಗಿದೆ. ಲೋಡಿಂಗ್ ಸಮಸ್ಯೆಯಿಂದ ಸಾವಿರಾರು ಬಳಕೆದಾರರಿಗೆ ತೊಂದರೆಯಾಗಿರಬಹುದು ಎಂದು ವರದಿ ತಿಳಿಸಿದೆ. ಆದರೆ ಟ್ವಿಟರ್ ನಲ್ಲಿ ಲೋಡಿಂಗ್ ಸಮಸ್ಯೆ ಯಾವ ದೇಶದಲ್ಲಿ ಕಂಡುಬಂದಿದೆ ಎಂಬ ಬಗ್ಗೆ ನಿಖರ ಮಾಹಿತಿ ನೀಡಿಲ್ಲ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More