ಅಮೇರಿಕನ್ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ ವರ್ಕಿಂಗ್ ಟ್ವಿಟರ್ ತನ್ನ ಟ್ವೀಟ್‌ ಡೆಕ್ ಪ್ಲಾಟ್‌ ಫಾರ್ಮ್‌ ನ ಬಗ್ಗೆ ಕಾರ್ಯನಿರ್ವಹಿಸುತ್ತಿದೆ, ಇದು ಬಳಕೆದಾರರಿಗೆ ಲಿಸ್ಟ್ ಗಳನ್ನು ಮತ್ತು ಫೀಡ್‌ ಗಳನ್ನು ಸುಲಭವಾಗಿ ಓದಲು ವರ್ಟಿಕಲ್ ರೋ ಜೋಡಣೆಯಲ್ಲಿ ಅನುವು ಮಾಡಿಕೊಡುತ್ತದೆ.

ಈ ವರ್ಷದ ಕೊನೆಯಲ್ಲಿ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಕಂಪನಿ ಯೋಜಿಸಿದೆ ಎಂದು ಉತ್ಪನ್ನ ಮುಖ್ಯಸ್ಥ ಕೇವೊನ್ ಬೇಕ್‌ ಪೋರ್ ಮಂಗಳವಾರ ಸುದ್ದಿ ಸಂಸ್ಥೆ ದಿ ವರ್ಜ್‌ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಓದಿ :  ಮಾರ್ಚ್ 13 ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ : ಧ್ರುವ ನಾರಾಯಣ್

ಸಾಮಾಜಿಕ ನೆಟ್ ವರ್ಕಿಂಗ್ ಸೇವೆಯ ಒಡೆತನದ ಪರ್ಯಾಯ ಟ್ವಿಟರ್ ಪ್ಲಾಟ್‌ ಫಾರ್ಮ್ ಟ್ವೀಟ್‌ಡೆಕ್, ಕಾಲಮ್‌ ಗಳಲ್ಲಿ ಅನೇಕ ಟೈಮ್‌ ಲೈನ್‌ ಗಳನ್ನು ಪ್ರವೇಶಿಸುವುದು ಮತ್ತು ಟ್ವೀಟ್‌ ಗಳನ್ನು ನಿಗದಿಪಡಿಸುವುದು ಮುಂತಾದ ಹಲವಾರು ವಿಭಿನ್ನ ವೈಶಿಷ್ಟ್ಯಗಳನ್ನು ನೀಡಲಿದೆ  ಎಂದು ವರದಿಯಾಗಿದೆ.

ಇನ್ನು, ಟ್ವೀಟ್‌ ಡೆಕ್‌ ಗೆ ಕಳೆದ 10 ವರ್ಷಗಳಲ್ಲಿ ಯಾವುದೇ ಮಹತ್ವದ ನವೀಕರಣಗಳು ಬಂದಿರಲಿಲ್ಲ.

ಓದಿ :  ಸಾಮೂಹಿಕ ಅತ್ಯಾಚಾರ ಪ್ರಕರಣ ದೂರು ದಾಖಲಿಸಿದ ಬಾಲಕಿ ತಂದೆ ರಸ್ತೆ ಅಪಘಾತದಲ್ಲಿ ಸಾವು

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More