ಠಾಣೆಗೆ ಕರೆತರಲು ಹೋಗಿದ್ದಾಗ ಆರೋಪಿಯಿಂದ ಮಹಿಳಾ ಹೆಡ್ ಕಾನ್ಸ್​ಟೇಬಲ್​ಗೆ ಡ್ರ್ಯಾಗರ್ ನಿಂದ ಇರಿತ | Accused Attacked on Woman Police Head Constable in Bengaluru


ಆರೋಪಿ ರೌಡಿ ಆಸಾಮಿಯನ್ನು ಠಾಣೆಗೆ ಕರೆತರಲು ಹೋಗಿದ್ದಾಗ ಆರೋಪಿ ಮಹಿಳಾ ಹೆಡ್​ ಕಾನ್ಸ್​ಟೇಬಲ್​ಗೆ ಡ್ರ್ಯಾಗರ್​​ನಿಂದ ಇರಿದಿದ್ದಾನೆ.

ಠಾಣೆಗೆ ಕರೆತರಲು ಹೋಗಿದ್ದಾಗ ಆರೋಪಿಯಿಂದ ಮಹಿಳಾ ಹೆಡ್ ಕಾನ್ಸ್​ಟೇಬಲ್​ಗೆ ಡ್ರ್ಯಾಗರ್ ನಿಂದ ಇರಿತ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಆರೋಪಿ (Accused) ರೌಡಿ ಆಸಾಮಿಯನ್ನು ಠಾಣೆಗೆ ಕರೆತರಲು ಹೋಗಿದ್ದಾಗ ಆರೋಪಿ ಮಹಿಳಾ ಹೆಡ್​ ಕಾನ್ಸ್​ಟೇಬಲ್​ಗೆ (Police Head Constable) ಡ್ರ್ಯಾಗರ್​​ನಿಂದ ಇರಿದಿದ್ದಾನೆ.  ವಿನುತಾ(45) ಇರಿತಕ್ಕೆ ಒಳಗಾದ ಮಹಿಳಾ ಪೊಲೀಸ್ ಹೆಡ್​ಕಾನ್ಸ್​ಟೇಬಲ್. ಆರೋಪಿ ರೌಡಿ ಆಸಾಮಿ ಶೇಕ್ ಶರೀಫ್ ಶರೀಫ್ (25) ನಿಂದ ಕೃತ್ಯ ನಡೆದಿದೆ. ಆರೋಪಿ ಮೇಲೆ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳು ಎಚ್ ಎ ಎಲ್ ಠಾಣೆಯಲ್ಲಿ ದಾಖಲಾಗಿದ್ದವು.

ಆರೋಪಿ ಇತ್ತೀಚೆಗರ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದನು. ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು. ಅಲ್ಲದೇ ಮತ್ತೆ ಕೊಲೆ ಮಾಡಲು ಸಂಚು ರೂಪಿಸಿರೋದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನಲೆ ಆತನನ್ನು ಠಾಣೆಗೆ ಕರೆತರಲು ಆಗಸ್ಟ್ 5 ರಂದು ಮಹಿಳಾ ಹೆಡ್​ ಕಾನ್ಸ್​ಟೇಬಲ್ ವಿನುತಾ ಮತ್ತು ತಂಡ ಹೋಗಿತ್ತು.

ಪೊಲೀಸರಿಗೆ ಆರೋಪಿ ಜ್ಯೋತಿನಗರದಿಂದ ರೆಡ್ಡಿ ಪಾಳ್ಯಕ್ಕೆ ತೆರಳ್ತಿರುವ ಬಗ್ಗೆ  ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧಾರದ ಮೇಲೆ ರಾತ್ರಿ 9.30 ಕ್ಕೆ ಆತನನ್ನು ಕರೆದುಕೊಂಡು ಹೋಗಲು ತಂಡ ಮುಂದಾಗಿದೆ. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಡ್ರ್ಯಾಗರ್ ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೆ ಸ್ಥಳೀಯರ ಸಹಾಯದಿಂದ ಆತನ್ನನ್ನು ಹಿಡಿದು ಪೊಲೀಸರು ಠಾಣೆಗೆ ಕರೆತಂದಿದ್ದಾರೆ.

ಗಾಯಾಳು ಮಹಿಳಾ ಹೆಡ್​ ಕಾನ್ಸ್​ಟೇಬಲ್​ ಜೀವಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಘಟನೆ ಸಂಬಂದ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.