ಚಿಕ್ಕೋಡಿ/ಬೆಳಗಾವಿ: ಠಾಣೆಯ ಆವರಣದಲ್ಲಿ ಹಾಡಹಗಲೇ ಗುಂಡು, ತುಂಡು ಸೇವಿಸುವ ಮೂಲಕ ಅಗ್ನಿಶಾಮಕ ಸಿಬ್ಬಂದಿ ದುರ್ವರ್ತನೆ ತೋರಿದ್ದಾರೆ.

ಅಥಣಿಯ ಅಗ್ನಿಶಾಮಕ ದಳದ ಠಾಣೆಯಲ್ಲಿ ಘಟನೆ ನಡೆದಿದೆ. ಅಥಣಿಯ ಅಗ್ನಿಶಾಮಕ ದಳದ ಸಿಬ್ಬಂದಿ ಠಾಣೆಯ ಆವರಣದಲ್ಲೆ ಗುಂಡು, ತುಂಡಿನ ಮೋಜುಮಸ್ತಿಯಲ್ಲಿ ತೊಡಗಿರುವ ದೃಶ್ಯಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ. ಈ ದೃಶ್ಯವನ್ನು ಚಿತ್ರೀಕರಿಸಲು ಮುಂದಾಗುತ್ತಿದ್ದಂತೆ ಕ್ಯಾಮೆರಾ ಕಂಡ ಸಿಬ್ಬಂದಿ ಮದ್ಯ ಮುಚ್ಚಿಡಲು ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಏನು ಇಲ್ಲ ಊಟ ಮಾಡುತ್ತಿದ್ದೇವೆ ಅಷ್ಟೇ ಎಂದು ಸಮಾಜಾಯಿಸಿ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಬಂಗಾರದ ಮೋಹದ ರಾಣಿಯ ಮಹಾವಂಚನೆಯ ಕಥೆ – RBI ಹೆಸರಿನಲ್ಲಿ ನಕಲಿ ದಾಖಲೆ

ಅಥಣಿ ತಾಲೂಕಿನಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದರೆ ಏನು ಗತಿ, ಸಿಬ್ಬಂದಿ ಬರುತ್ತಾರೆಂಬ ವಿಶ್ವಾಸದಲ್ಲಿರುವ ಜನರ ಗತಿ ಏನು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಠಾಣೆಯ ಆವರಣದಲ್ಲೇ ಗುಂಪಾಗಿ ಕುಳಿತು ಭರ್ಜರಿ ಎಣ್ಣೆ ಸವಿಯುತ್ತ, ಮಾಂಸಹಾರ ಊಟ ಮಾಡಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.

The post ಠಾಣೆಯ ಆವರಣದಲ್ಲಿ ಹಾಡಹಗಲೇ ಗುಂಡು, ತುಂಡು- ಅಗ್ನಿಶಾಮಕ ಸಿಬ್ಬಂದಿ ದುರ್ವರ್ತನೆ appeared first on Public TV.

Source: publictv.in

Source link