ಡಬಲ್​ ಖುಷಿಯಲ್ಲಿ ಸುವರ್ಣ ಸೂಪರ್​ ಜೋಡಿ; ಏನದು?


ಸುವರ್ಣ ಸೂಪರ್​ ಜೋಡಿ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಜೋಡಿ ಅಂದ್ರೇ ವಿನಯ್​-ಅಕ್ಷತಾ. ಈ ಮುದ್ದಾದ ಜೋಡಿ ಈಗ ಎರಡೆರಡು ಸಂಭ್ರಮದಲ್ಲಿದ್ದು, ಇಡೀ ಕುಟುಂಬ ಈ ಸಂಭ್ರಮದಲ್ಲಿ ಭಾಗಿಯಾಗಿದೆ.

ಒಂದು ಕಡೆ ಇವರ ಮುದ್ದಾದ ಮಗನ ಬರ್ತ್​ ಡೇ ಸಂಭ್ರಮ ಇದ್ರೇ ಮತ್ತೊಂದು ಕಡೆ ಅಕ್ಷತಾ ಅವರ ಜನ್ಮದಿನ ಕೂಡ ಇದ್ದು, ಡಬಲ್​ ಧಮಾಕದಲ್ಲಿದ್ದಾರೆ ವಿನಯ್ ಗೌಡ. ಮೊನ್ನೆ ಮನ್ನೆಯಷ್ಟೆಯೇ ಈ ದಂಪತಿ ತಮ್ಮ ಮುದ್ದು ಮಗ ರಿಶಬ್​ನ ಬರ್ತ್​ ಡೇಯನ್ನ ಸಖತ್​ ಆಗಿ ಸೆಲೆಬ್ರೇಟ್​ ಮಾಡಿದ್ರು.

ತಮ್ಮ ಬ್ಯುಸಿ ಕೆಲಸದ ನಡುವೆ ವಿನಯ್ ಮಗನಿಗೆ ಟೈಮ್​ ಕೊಡೊದನ್ನ ಮಿಸ್​ ಮಾಡೊದಿಲ್ಲ. ರಿಶಬ್​ ಜೊತೆ ಕಾಲ ಕೆಳೆದು, ಒಂದಿಷ್ಟು ವಿಡಿಯೋಗಳನ್ನ ಶೂಟ್​ ಮಾಡುವವರೆಗೂ ವಿನಯ್​ಗೆ ಸಮಾಧಾನ ಇರೋದಿಲ್ಲ. ಇನ್ನೂ ಅಪ್ಪ-ಮಗ ಸೇರಿ ಅಮ್ಮನ ಕಾಲ್​ ಎಳಿಯೋದನ್ನ ಮಿಸ್ಸೇ ಮಾಡಲ್ವಂತೆ.

ಇದೆಲ್ಲಾ ಒಂದು ಕಡೆಯಾದ್ರೇ ಅಕ್ಷತಾ ಅವರ ಪ್ರೇಗ್ನೇನ್ಸಿ ಟೈಮ್​ನ ಸ್ಟೋರಿಯನ್ನ ನೀವು ಕೇಳಲೇಬೇಕು. ಅಕ್ಷತಾ-ವಿನಯ್​ ಲವ್​ ಮಾಡಿ ಮದುವೆಯಾಗಿದ್ರಿಂದ ಹಲವು ವರ್ಷಗಳ ಕಾಲ ಸ್ಟ್ರಗ್ಲಿಂಗ್​ ಲೈಫ್​ ಇವರದಾಗಿತ್ತು. ಆ ಟೈಮ್​ನಲ್ಲಿಯೇ ಅಕ್ಷತಾ ಪ್ರೆಗ್ನೇಂಟ್​ ಆಗಿದ್ದು ತಿಳಿದು, ಈಗಲೇ ಮಗು ಬೇಡ ಅಂತಾ ಅಬಾರ್ಶನ್​ ಮಾಡಿಸೊಣ ಅಂತಾ ಡಿಸೈಡ್​ ಮಾಡಿದ್ರಂತೆ. ಆದ್ರೇ ಒನ್​ ಪಾಯಿಂಟ್​ ಆಫ್​ ವಿವ್​ನಲ್ಲಿ ಅದೇನಾದ್ರೂ ಆಗ್ಲಿ ಮಗು ಇರ್ಲಿ ಅಂತಾ ಡಿಸೈಡ್​ ಮಾಡಿದಾಗ ಹುಟ್ಟಿದ್ದೇ ರಿಶಬ್​..ಈಗ ಆ ಮುದ್ದು ರಿಶಬ್​​​ನ ಹುಟ್ಟು ಹುಬ್ಬದ ಸಂಭ್ರಮದಲ್ಲಿದೆ ಇಡಿ ಕುಟುಂಬ.

ಇನ್ನೊಂದು ಖುಷಿಯ ವಿಚಾರ ಅಂದ್ರೇ 17ನೇ ತಾರಿಖು ಅಂದ್ರೇ ನಿನ್ನೆ ಅಕ್ಷತಾ ಅವರ ಹುಟ್ಟು ಹಬ್ಬ ಜರುಗಿದ್ದು. ಪ್ರೀತಿಯ ಪತ್ನಿಗೆ ವಿನಯ್​ ಸರ್ಪೈಸ್​ ಪಾರ್ಟಿ ನೀಡಿ, ಅಕ್ಷತಾರ ಬರ್ತ್​ ಡೇಯನ್ನ ಹಬ್ಬದಂತೆ ಸಂಭ್ರಮಿಸಿದ್ದಾರೆ.
ಒಟ್ನಲ್ಲಿ ಒಂದೇ ದಿನದ ಗ್ಯಾಪ್​ನಲ್ಲಿ ಅಮ್ಮ-ಮಗ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ನಮ್ಮ ಕಡೆಯಿಂದ ಇಬ್ಬರಿಗೂ ಹ್ಯಾಪಿ ಬರ್ತ್​ ಡೇ.

ಇದನ್ನೂ ಓದಿ:ಗ್ರ್ಯಾಂಡ್​ ಫಿನಾಲೆ ತಲುಪಿದ 6 ಜೋಡಿಗಳು; ನಿಮ್ಮ ಪ್ರಕಾರ ರಾಜಾ-ರಾಣಿ ಯಾರು ವಿನ್​ ಆಗಬೇಕು..?

News First Live Kannada


Leave a Reply

Your email address will not be published. Required fields are marked *