ಬೆಂಗಳೂರು: ಲಾಕ್ ಡೌನ್ ವೇಳೆ ಅಕ್ರಮ ಮದ್ಯ ಮಾರಾಟ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ 89,630 ಸಾವಿರ ಬೆಲೆ ಬಾಳುವ 198 ಲೀಟರ್ ಮದ್ಯವನ್ನ ವಶಕ್ಕೆ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಹಾಗೂ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ವಾಹನ ಚಾಲಕ ವೇಲು (27) ಎಂಬಾತನನ್ನ ಬಂಧಿಸಲಾಗಿದೆ.

ವೇಲು ದೊಡ್ಡತೊಗುರಿನ ಬಾರ್​ನಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡ್ತಿದ್ದ ಎನ್ನಲಾಗಿದೆ. ಲಾಕ್ ಡೌನ್​ಲ್ಲಿ ಮದ್ಯವನ್ನ ಶೇಖರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗ್ತಿತ್ತು ಎನ್ನಲಾಗಿದೆ. ಇನ್ಸ್‌ಪೆಕ್ಟರ್ ಅನಿಲ್ ನೇತೃತ್ವದ ತಂಡ ದಾಳಿ ನಡೆಸಿದ್ದು 23 ಮದ್ಯದ ಬಾಕ್ಸ್, ವಾಹನ ಹಾಗೂ ಮೊಬೈಲ್​ಗಳನ್ನ ವಶಕ್ಕೆ ಪಡೆಯಲಾಗಿದೆ.

ಬೇಗೂರು ಇನ್ಸ್‌ಪೆಕ್ಟರ್ ಶಿವಪ್ರಸಾದ್ ನೇತೃತ್ವದಲ್ಲಿ ಮತ್ತೊಂದು ದಾಳಿ ನಡೆದಿದ್ದು 1.20 ಲಕ್ಷ ಬೆಲೆ ಬಾಳುವ 200 ಲೀಟರ್ ಮದ್ಯ ಹಾಗೂ ಕಂಟೈನರ್ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಕುಮಾರ್, ಬಾಲಾಜಿ, ಜಗನ್, ಸುಂದರ್ ಮೂರ್ತಿ ಹಾಗೂ ರಾಜೇಶ್ ಎಂಬಾತನನ್ನ ವಶಕ್ಕೆ ಪಡೆಯಲಾಗಿದೆ. ಎರಡೂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

The post ಡಬಲ್ ಬೆಲೆಗೆ ಅಕ್ರಮ ಮದ್ಯ ಮಾರಾಟ: ಸೀಜ್​ ಆಯ್ತು ಲಕ್ಷಾಂತರ ಮೌಲ್ಯದ ಲಿಕ್ಕರ್ appeared first on News First Kannada.

Source: newsfirstlive.com

Source link