
ಅಂಕೋಲ ಆಯುರ್ವೇದ ಆಸ್ಪತ್ರೆ
ಅಂಕೋಲ ನಗರದ ಜಟಗೇಶ್ವರ ಆಯುರ್ವೇದ ಆಸ್ಪತ್ರೆಯಮೇಲೆ ಅಂಕೋಲ ತಾಲೂಕು ವೈದ್ಯಾಧಿಕಾರಿ ಅಶೋಕ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.
ಉತ್ತರ ಕನ್ನಡ: ಅಂಕೋಲಾ (Ankola) ನಗರದ ಜಟಗೇಶ್ವರ ಆಯುರ್ವೇದ (Ayurveda) ಆಸ್ಪತ್ರೆಯ (Hospital) ಮೇಲೆ ಅಂಕೋಲಾ ತಾಲೂಕು ವೈದ್ಯಾಧಿಕಾರಿ (Health officer) ಅಶೋಕ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ. ವೈದ್ಯ ವೈ.ಆರ್.ರೆಡ್ಡಿ ಯಾವುದೇ ಅನುಮತಿ ಇಲ್ಲದೆ ವೈದ್ಯ ಪದವಿ ಸರ್ಟಿಫಿಕೇಟ್ ಸಹ ಇಲ್ಲದೆ ನಡೆಸುತ್ತಿರುವ ಹಿನ್ನೆಲೆ ದಾಳಿ ಮಾಡಿದ್ದು, ಅಂಕೋಲಾ ಠಾಣೆಯಲ್ಲಿ ನಕಲಿ ವೈದ್ಯ ವೈ.ಆರ್.ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.