‘ಡಾನ್ಸಿಂಗ್ ಚಾಂಪಿಯನ್’ ಫಿನಾಲೆಯಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್; ಶೋ ಗೆದ್ದವರಿಗೆ ಇದೆ ವಿಶೇಷ ಬಹುಮಾನ | Ashwini Puneeth Rajkumar Seen in Colors Kannada Dancing Champion


‘ಡಾನ್ಸಿಂಗ್ ಚಾಂಪಿಯನ್’ ಫಿನಾಲೆಯಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್; ಶೋ ಗೆದ್ದವರಿಗೆ ಇದೆ ವಿಶೇಷ ಬಹುಮಾನ

ಅಶ್ವಿನಿ ಪುನೀತ್

ಪುನೀತ್ ಅವರನ್ನು ಕಳೆದುಕೊಂಡು ಏಳು ತಿಂಗಳು ಕಳೆಯುತ್ತಾ ಬಂದಿದೆ. ಪುನೀತ್ ಪತ್ನಿ ಅಶ್ವಿನಿ ಅವರು ಆ ಘಟನೆಯಿಂದ ಸಾಕಷ್ಟು ನೊಂದಿದ್ದಾರೆ. ಆದರೆ, ಅವರಿಲ್ಲದೆ ಜೀವನ ಸಾಗಿಸಲೇಬೇಕಿದೆ.

‘ಕಲರ್ಸ್ ಕನ್ನಡ’ (Colors Kannada) ವಾಹಿನಿ ನಿತ್ಯ ಹೊಸಹೊಸ ರಿಯಾಲಿಟಿ ಶೋ ಹಾಗೂ ಧಾರಾವಾಹಿ ಮೂಲಕ ವೀಕ್ಷಕರ ಎದುರು ಬರುತ್ತಿದೆ. ಹತ್ತು ಹಲವು ರಿಯಾಲಿಟಿ ಶೋಗಳನ್ನು ಪರಿಚಿಯಿಸಿದ ಖ್ಯಾತಿ ಈ ವಾಹಿನಿಗೆ ಇದೆ. ‘ಡಾನ್ಸಿಂಗ್ ಚಾಂಪಿಯನ್’ ಹೆಸರಿನ ಶೋ ಮೂಲಕ ವೀಕ್ಷಕರನ್ನು ರಂಜಿಸುವ ಕೆಲಸ ಆಗುತ್ತಿದೆ. ಈಗ ‘ಡಾನ್ಸಿಂಗ್ ಚಾಂಪಿಯನ್’ (Dancing Champion) ಫಿನಾಲೆ ಹಂತ ತಲುಪಿದೆ. ಇದೇ ಭಾನುವಾರ (ಮೇ 29) ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಇದಕ್ಕೆ ಪುನೀತ್ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ ಅವರು (Ashwini Puneeth Rajkumar) ಆಗಮಿಸಿದ್ದು ವಿಶೇಷ.

ಪುನೀತ್ ಅವರನ್ನು ಕಳೆದುಕೊಂಡು ಏಳು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಅವರಿಲ್ಲ ಎನ್ನುವ ನೋವು ಎಲ್ಲರಲ್ಲೂ ಹಾಗೆಯೇ ಉಳಿದುಕೊಂಡಿದೆ. ಪುನೀತ್ ಪತ್ನಿ ಅಶ್ವಿನಿ ಅವರು ಆ ಘಟನೆಯಿಂದ ಸಾಕಷ್ಟು ನೊಂದಿದ್ದಾರೆ. ಆದರೆ, ಅವರಿಲ್ಲದೆ ಜೀವನ ಸಾಗಿಸಲೇಬೇಕಿದೆ. ಹೀಗಾಗಿ, ಅವರು ಮರಳಿ ಚಿತ್ರರಂಗದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಪುನೀತ್ ಕನಸಿನ ಕೂಸು ‘ಪಿಆರ್​​ಕೆ ಪ್ರೊಡಕ್ಷನ್​’ ಮೂಲಕ ಹಲವು ಚಿತ್ರಗಳನ್ನು ನಿರ್ಮಿಸುವ ಕೆಲಸ ಆಗುತ್ತಿದೆ. ಈ ಮಧ್ಯೆ ಅಶ್ವಿನಿ ಅವರು ಕಿರುತೆರೆ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ.

ಪುನೀತ್ ರಾಜ್​ಕುಮಾರ್ ಅವರಿಗೂ ಕಲರ್ಸ್ ಕನ್ನಡಕ್ಕೂ ಒಳ್ಳೆಯ ನಂಟಿತ್ತು. ‘ಕನ್ನಡದ ಕೋಟ್ಯಧಿಪತಿ’ ನಾಲ್ಕನೇ ಸೀಸನ್ ಕಲರ್ಸ್​ನಲ್ಲಿ ಪ್ರಸಾರವಾಯಿತು. ಇದರ ನಿರೂಪಣೆಯನ್ನು ಪುನೀತ್ ನಿರ್ವಹಿಸುತ್ತಿದ್ದರು. ಈ ಕಾರಣಕ್ಕೆ ಅಶ್ವಿನಿ ಅವರಿಗೂ ಕಲರ್ಸ್​ ಜತೆ ನಂಟು ಬೆಳೆದಿದೆ. ‘ಡಾನ್ಸಿಂಗ್ ಚಾಂಪಿಯನ್’ ಫಿನಾಲೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *