ಬಿಗ್ಬಿ ಅಮಿತಾಬ್ ಬಚ್ಚನ್ ತೆಲುಗು ನಟ ಬಾಹುಬಲಿ ಪ್ರಭಾಸ್ ಜೊತೆ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ. ಇನ್ನೂ ಹೆಸರಿಡದ ಸಿನಿಮಾಕ್ಕೆ ಪ್ರಾಜೆಕ್ಟ್ ಕೆ ಎಂದು ಕರೆಯಲಾಗಿದೆ.
ಮೊದಲ ದಿನದ ಚಿತ್ರೀಕರಣ ಇತ್ತೀಚೆಗೆ ನಡೆದಿದೆ. ಈ ಬಗ್ಗೆ ಅಮಿತಾಬ್ ಮತ್ತು ಪ್ರಭಾಸ್ ಇಬ್ಬರೂ ಸಂತಸ ವ್ಯಕ್ತಪಡಿಸಿದ್ದಾರೆ. ಅಮಿತಾಬ್ ಬಚ್ಚನ್ ತಮ್ಮ ಟ್ವೀಟರ್ನಲ್ಲಿ ಪೋಸ್ಟ್ ಶೇರ್ ಮಾಡಿ ಬಾಹುಬಲಿ ಪ್ರಭಾಸ್ನಿಂದ ಸಾಕಷ್ಟು ಕಲಿಯಲಿದ್ದೇನೆ ಎಂದು ಬಿಗ್ ಬಿ ಹೇಳಿದ್ದಾರೆ. ಬಚ್ಚನ್ ಜೊತೆ ನಟಿಸುವ ಕನಸು ನನಸಾಯಿತು ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ದೀಪಿಕಾ ಪಡುಕೋಣೆಗೆ ಪ್ರಭಾಸ್ ಜೊತೆಗಿನ ಮೊದಲ ಚಿತ್ರವಾಗಿದೆ. ಚಿತ್ರದ ನಿರ್ಮಾಪಕರು ದೀಪಿಕಾ ಮತ್ತು ಪ್ರಭಾಸ್ ಅವರ ಆನ್ ಸ್ಕ್ರೀನ್ ಜೋಡಿಯ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಈ ಚಿತ್ರವನ್ನು ವೈಜಯಂತಿ ಮೂವೀಸ್ ನಿರ್ಮಿಸಿದೆ.
T 4196 – … first day .. first shot .. first film with the ‘Bahubali’ Prabhas .. and such a honour to be in the company of his aura, his talent and his extreme humility
.. to imbibe to learn .. !!
— Amitabh Bachchan (@SrBachchan) February 18, 2022
The post ಡಾರ್ಲಿಂಗ್ ಪ್ರಭಾಸ್ ಕಂಡಿದ್ದ ಬಹುದೊಡ್ಡ ಕನಸು ನನಸು; ಏನದು ಗೊತ್ತಾ..? appeared first on News First Kannada.