ನಟರಾಕ್ಷಸ ಡಾಲಿ ಧನಂಜಯಗೂ ಹೈದರಾಬಾದ್​ಗೂ ಅದೇನೋ ಒಂಥರಾ ವಿಶೇಷ ನಂಟು ಬೆಳೆದುಕೊಂಡಂತಿದೆ. ಪ್ಯಾನ್​ ಇಂಡಿಯಾ ಸಿನಿಮಾ ಪುಷ್ಪದ ತಮ್ಮ ಶೂಟಿಂಗ್​ ಶುರುವಾದಾಗಿನಿಂದ ಬಹುತೇಕ ಹೈದರಾಬಾದ್​ನಲ್ಲೇ ಸಮಯ ಕಳೆದಿರುವ ನಟ ಡಾಲಿ ಧನಂಜಯ, ಇದೀಗ ಮತ್ತೆ ಹೈದರಾಬಾದ್​ಗೆ ತೆರಳಲಿದ್ದಾರೆ. ಆದ್ರೆ ಈ ಬಾರಿ ಪುಷ್ಪ ಶೂಟಿಗಲ್ಲ. ಬದಲಾಗಿ ನಿರ್ದೇಶಕ ರೋಹಿತ್​ ಪದಕಿ ಆ್ಯಕ್ಷನ್​ ಕಟ್​ ಹೇಳ್ತಿರುವ ಕನ್ನಡ ಸಿನಿಮಾ ರತ್ನನ್​ ಪ್ರಪಂಚ ಚಿತ್ರೀಕರಣಕ್ಕೆ.

ಹೌದು.. 2020ರಲ್ಲಿ ಧನಂಜಯ ಒಪ್ಪಿಕೊಂಡ ಸಾಲು ಸಾಲು ಸಿನಿಮಾಗಳಲ್ಲಿ ರತ್ನನ್​ ಪ್ರಪಂಚ ಕೂಡ ಒಂದು. ಈ ಸಿನಿಮಾದ ಶೂಟಿಂಗ್​​ ಬಹುತೇಕ ಮುಗಿದಿದ್ದು, ಕೊನೆಯ ಹತ್ತು ದಿನಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಕರ್ನಾಟಕದಲ್ಲಿ ಲಾಕ್​ಡೌನ್​ ಆಗಿ ಚಿತ್ರತಂಡದ ಎಲ್ಲಾ ಪ್ಲ್ಯಾನ್ಸ್​​ ಬದಲಾಗಿದಂತಿದೆ. ಯೆಸ್​.. ಬೆಂಗಳೂರಿನಲ್ಲಿ ಈ ತಿಂಗಳ ಅಂತ್ಯದ ಒಳಗೆ ಚಿತ್ರೀಕರಣಕ್ಕೆ ಅವಕಾಶ ಸಿಗದೇ ಹೋದಲ್ಲಿ, ರತ್ನನ್​ ಪ್ರಪಂಚ ತಂಡ ಹೈದರಾಬಾದ್​ಗೆ ಹಾರೋದು ಬಹತೇಕ ಕನ್ಫರ್ಮ್​​ ಆಗಿದೆ. ಹೈದರಾಬಾದ್​ನಲ್ಲಿ ಜೂನ್​ 28ರಿಂದ ಶೂಟಿಂಗ್​ ಮಾಡುವ ಮಾತುಕತೆ ಸದ್ಯ ನಡೆಯುತ್ತಿದೆ ಅಂತ ಚಿತ್ರತಂಡದ ಕಡೆಯಿಂದ ನ್ಯೂಸ್​ ಫಸ್ಟ್​ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಸದ್ಯ ರತ್ನನ್​ ಪ್ರಪಂಚದ ಡಬ್ಬಿಂಗ್​ ಶುರುವಾಗಿದ್ದು, ಡಾಲಿ ಧನಂಜಯ ಹಾಗೂ ಹಿರಿಯ ನಟಿ ಉಮಾಶ್ರೀ ತಮ್ಮ ಭಾಗದ ಡಬ್ಬಿಂಗ್​ ಶುರು ಮಾಡಲಿದ್ದಾರೆ. ರತ್ನನ್​ ಪ್ರಪಂಚದಲ್ಲಿ ಇನ್ಶುರೆನ್ಸ್​​ ಏಜೆಂಟ್​​ ಆಗಿ ನಟಿಸಿರುವ ಧನಂಜಯಗೆ ರೆಬಾ ಮೋನಿಕಾ ನಾಯಕಿಯಾಗಿ ಜೋಡಿಯಾಗಿದ್ದಾರೆ. ಧನಂಜಯ ತಾಯಿ ಪಾತ್ರದಲ್ಲಿ ನಟಿ ಉಮಾಶ್ರೀ ನಟಿಸುತ್ತಿದ್ದು, ಬರೋಬ್ಬರಿ ಐದು ವರ್ಷಗಳ ಬಳಿಕ ಚಿತ್ರರಂಗಕ್ಕೆ ರತ್ನನ್​ ಪ್ರಪಂಚ ಮೂಲಕ ವಾಪಾಸಾಗಿದ್ದಾರೆ. ಕೆಆರ್​ಜಿ ಸ್ಟುಡಿಯೋಸ್​ ಬ್ಯಾನರ್​ನಡಿಯಲ್ಲಿ ಕಾರ್ತಿಕ್​​ ಗೌಡ ಹಾಗೂ ಯೋಗಿ ರಾಜ್​ ಬಂಡವಾಳ ಹೂಡ್ತಿದ್ದಾರೆ.

 

The post ಡಾಲಿ ಧನಂಜಯಗೂ ಹೈದರಾಬಾದ್​ಗೂ ಅದೇನೋ ನಂಟು; ರತ್ನನ್​ ಪ್ರಪಂಚ ಪ್ಲ್ಯಾನ್​ ಬದಲು.? appeared first on News First Kannada.

Source: newsfirstlive.com

Source link