ಡಾ.ದೇವಿಶೆಟ್ಟಿ ಸಮಿತಿ ಶಿಫಾರಸ್ಸಿನಂತೆ ಶಾಲಾ-ಕಾಲೇಜು ಪ್ರಾರಂಭ ಮಾಡಿ: ದೊರೆಸ್ವಾಮಿ

ಬೆಂಗಳೂರು : ಡಾ.ದೇವಿಶೆಟ್ಟಿ ನೇತೃತ್ವದ ಸಮಿತಿಯ ಶಿಫಾರಸ್ಸು ಅನ್ವಯ ಶಾಲಾ-ಕಾಲೇಜು ಪ್ರಾರಂಭ ಮಾಡಬೇಕು ಎಂದು ಸರ್ಕಾರಕ್ಕೆ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರಾಗಿರುವ ಪ್ರೊ ಎಂ.ಆರ್. ದೊರೆಸ್ವಾಮಿ ಸಲಹೆ ನೀಡಿದ್ದಾರೆ.

ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಶಾಲಾ-ಕಾಲೇಜು, ಪದವಿ ಕಾಲೇಜುಗಳ ಹೇಗೆ ಪ್ರಾರಂಭ ಮಾಡಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ಶಾಲಾ-ಕಾಲೇಜುಗಳ ಪ್ರಾರಂಭ ವಿಚಾರದಲ್ಲಿ 4 ಸಲಹೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ.

ಸಲಹೆಗಳೇನು?
1. ಶಾಲಾ-ಕಾಲೇಜು ಪ್ರಾರಂಭವನ್ನ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ನೀಡಿದ ಶಿಫಾರಸ್ಸಿನಂತೆ ಪ್ರಾರಂಭ ಮಾಡಿ. ಇಡೀ ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಮಾಡುವ ಬದಲು ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಿ. ಯಾವ ಜಿಲ್ಲೆಯಲ್ಲಿ ಶಾಲಾ-ಕಾಲೇಜು ಪ್ರಾರಂಭ ಮಾಡಲು ಸಾಧ್ಯವೋ ಅಲ್ಲಿ ಡಿಸಿಗಳ ಜವಾಬ್ದಾರಿ ಶಾಲಾ-ಕಾಲೇಜು ಪ್ರಾರಂಭಕ್ಕೆ ಅನುಮತಿ ಕೊಡಿ.

2. ಶಾಲಾ-ಕಾಲೇಜು ಆರೋಗ್ಯ ಕಾರ್ಯಪಡೆಯ ಶಿಫಾರಸ್ಸು ಗಳನ್ನು ವಿದ್ಯಾ ಸಂಸ್ಥೆಗಳ ಹೊಣೆಗಾರಿಕೆಯಲ್ಲಿ ಚಾಚು ತಪ್ಪದೇ ಪಾಲಿಸಬೇಕು. ಇದನ್ನೂ ಓದಿ: ಪತ್ನಿಯಿಂದ ದೂರವಿರಲು ಕೋವಿಡ್ ಪಾಸಿಟಿವ್ ನಕಲಿ ವರದಿ ಮನೆಗೆ ಕಳಿಸಿದ

3. ಪದವಿ ಕಾಲೇಜುಗಳ ಪ್ರಾರಂಭ ಆಗಸ್ಟ್ 9ರ ಬಳಿಕ ಮಾಡಿ. ಈಗಾಗಲೇ ಲಸಿಕೆ ಅಭಿಯಾನ ಪ್ರಾರಂಭವಾಗಿದೆ. ಲಸಿಕೆ ಅಭಿಯಾನ ಮುಗಿದ ಕೂಡಲೇ ಕಾಲೇಜು ಪ್ರಾರಂಭ ಮಾಡಿ. ಪಿಯುಸಿ ಫಲಿತಾಂಶ ಜುಲೈ 2ನೇ ವಾರದಲ್ಲಿ ಬರಲಿದೆ. ಪದವಿ ಪ್ರವೇಶಾತಿ ಪ್ರಕ್ರಿಯೆಗಳಿಗೆ ಕನಿಷ್ಠ 2-3 ವಾರಗಳ ಕಾಲಾವಕಾಶ ಕೊಟ್ಟ ಪ್ರಾರಂಭಿಸಿ.

4. ಜುಲೈ 15 ನಂತರ ಪರೀಕ್ಷೆಗಳನ್ನ ಪ್ರಾರಂಭಿಸಿ.

The post ಡಾ.ದೇವಿಶೆಟ್ಟಿ ಸಮಿತಿ ಶಿಫಾರಸ್ಸಿನಂತೆ ಶಾಲಾ-ಕಾಲೇಜು ಪ್ರಾರಂಭ ಮಾಡಿ: ದೊರೆಸ್ವಾಮಿ appeared first on Public TV.

Source: publictv.in

Source link