ಡಾ ರಮಣ ರಾವ್ ಅವರಂಥ ನಿಸ್ವಾರ್ಥ, ಮಾನವೀಯ ಕಳಕಳಿಯ ವೈದ್ಯ ಪುನೀತ್ ಅರೋಗ್ಯ ನಿರ್ಲಕ್ಷಿಸುವುದು ಸಾಧ್ಯವೇ? | How can a doctor of Dr Raman Rao’s caliber can ignore Puneeth’s health condition? It’s a foolish argument


ಡಾ ರಮಣ ರಾವ್ ಸೆಲಿಬ್ರಿಟಿಗಳ ವೈದ್ಯರಾಗಿದ್ದಾರೆ. ಡಾ ರಾಜ್ ಕುಮಾರ್ ಅವರಿಗಂತೂ ಅವರು ಕುಟುಂಬ ವೈದ್ಯರು ಅನ್ನೋದು ಗೊತ್ತಿರುವ ವಿಚಾರವೇ. ಅವರು ಬಾಲಿವುಡ್ ಹೆಸರಾಂತ ನಟ ಅಮಿತಾಬ್ ಬಚ್ಚನ್ ಅವರಿಗೂ ಚಿಕಿತ್ಸೆ ನೀಡಿದ್ದಾರೆ. ಕಳೆದ ಶುಕ್ರವಾರ ಪುನೀತ್ ಮೊದಲು ತೆರಳಿದ್ದು ಇದೇ ವೈದ್ಯರ ಬಳಿಗೆ. ಆದರೆ ಅವರು ಅಲ್ಲಿಗೆ ಹೋಗುವಷ್ಟರಲ್ಲಿ ಬಹಳ ತಡವಾಗಿತ್ತು. ಕೆಲ ಅತಿರೇಕದ ಅಭಿಮಾನಿಗಳು ಡಾ ರಮಣ ರಾವ್ ಸೂಕ್ತ ಚಿಕಿತ್ಸೆ ನೀಡದ ಕಾರಣ ಅಪ್ಪು ಸಾಯಬೇಕಾಯಿತು ಅಂತ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗೇ, ವೈದ್ಯರ ಮನೆ ಮತ್ತು ಕ್ಲಿನಿಕ್ ಸುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಮೇರು ನಟರಲ್ಲದೆ ಬೇರೆ ಸೆಲಿಬ್ರಿಟಿಗಳು ಸಹ ಡಾ ರಮಣ ರಾವ್ ಅವರಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ಹಿರಿಯ ಅಧಿಕಾರಿಗಳು ನಗರದ ಕೆಲ ವಾಣಿಜೋದ್ಯಮಿಗಳು ಸಹ ಅವರ ಪೇಶೆಂಟ್​ಗಳು. ಅದರೆ ಗಮನಿಸಬೇಕಾದ ಸಂಗತಿಯೇನೆಂದರೆ, ತಮಗಿರುವ ಸೆಲಿಬ್ರಿಟಿ ಸ್ಟೇಟಸ್ ಡಾ ರಾವ್ ಅವರಿಗೆ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ರವಿವಾರದಂದು ಅವರು ತಮ್ಮ ಸೇವೆಯನ್ನು ಬಡವರಿಗಾಗಿ ಮೀಸಲಿಡುತ್ತಾರೆ.

ನಿಮಗೆ ಆಶ್ಚರ್ಯವಾಗಬಹುದು. ರವಿವಾರ ಅವರು ಬೆಂಗಳೂರಿನ ಟಿ ಬೇಗೂರಿನಲ್ಲಿರುವ ತಮ್ಮ ಕ್ಲಿನಿಕ್ ನಲ್ಲಿ ಕನಿಷ್ಟ 1,000 ಹೃದ್ರೋಗಿಗಳನ್ನು ಉಪಚರಿಸುತ್ತಾರೆ. ಫೀಸಿನ ರೂಪದಲ್ಲಿ ಅವರಿಂದ ಒಂದೇ ಒಂದು ರೂಪಾಯಿ ಅವರು ತೆಗೆದುಕೊಳ್ಳುವುದಿಲ್ಲ. 1974 ರಿಂದ ಅವರು ಜನರಿಗೆ ಉಚಿತ ಸೇವೆ ಒದಗಿಸುತ್ತಿದ್ದಾರೆ.

ಕೇವಲ ಶೀತ ಬಂದರೆ ನೂರೆಂಟು ಟೆಸ್ಟ್ ಗಳನ್ನು ಮಾಡಿಸಿ ಹಣ ಪೀಕುವ ವೈದ್ಯರ ನಡುವೆ ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಡಾ ರಾವ್ ಧೀಮಂತ ವ್ಯಕ್ತಿಯಾಗಿ ಗೋಚರಿಸುತ್ತಾರೆ. ಇಂಥ ಅಪರೂಪದ ಡಾಕ್ಟರ್ ತಮ್ಮ ಮುಂದೆಯೇ ಬೆಳೆದು ಸೂಪರ್ ಸ್ಟಾರ್ ಆದ ಪುನೀತ್ ಅವರಂಥ ಸೆಲಿಬ್ರಿಟಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸಾಧ್ಯವೇ? ಹುಚ್ಚು ಯೋಚನೆಗೆ ಒಂದು ಮಿತಿ ಬೇಡವೇ?

ಇದನ್ನೂ ಓದಿ:   ಬೆಂಗಳೂರಿನ ಎಸ್​ಆರ್​ವಿ ಥಿಯೇಟರ್​ನಲ್ಲಿ ಕೊನೆಯದಾಗಿ ಅಟೆಂಡ್​ ಮಾಡಿದ್ದ ಪುನೀತ್​; ಇಲ್ಲಿದೆ ಸಿಸಿಟಿವಿ ವಿಡಿಯೋ

TV9 Kannada


Leave a Reply

Your email address will not be published. Required fields are marked *