‘ಡಾ. ರಾಜ್​ಕುಮಾರ್​ ಬಗ್ಗೆ ಅವರ ತಂದೆ ನುಡಿದಿದ್ರು ಭವಿಷ್ಯ’: ಅಚ್ಚರಿಯ ಘಟನೆ ಮೆಲುಕು ಹಾಕಿದ ರಾಘಣ್ಣ | Raghavendra Rajkumar shares rare incident about Dr Rajkumar father


ಡಾ. ರಾಜ್​ಕುಮಾರ್​ (Dr Rajkumar) ಅವರದ್ದು ಕಲಾವಿದರ ಕುಟುಂಬ. ಅವರ ತಂದೆಯ ಕಾಲದಿಂದಲೂ ಆ ಕುಟುಂಬ ಕಲೆಗೆ ಮೀಸಲಾಗಿತ್ತು. ರಾಜ್​ಕುಮಾರ್​ ಅವರನ್ನು ಸಿನಿಮಾದಲ್ಲಿ ಹೀರೋ ಆಗಿಸಬೇಕು ಎಂಬುದು ಅವರ ತಂದೆಯ ಆಸೆ ಆಗಿತ್ತು. ಅದಕ್ಕಾಗಿ ಅವರು ಕೆಲವು ಪ್ರಯತ್ನಗಳನ್ನೂ ಮಾಡಿದ್ದರು. ಒಮ್ಮೆ ಆ ಕುರಿತು ಭವಿಷ್ಯ ಕೂಡ ನುಡಿದಿದ್ದರಂತೆ. ಆ ಘಟನೆಯನ್ನು ರಾಘವೇಂದ್ರ ರಾಜ್​ಕುಮಾರ್​ (Raghavendra Rajkumar) ಅವರು ಈಗ ಮೆಲುಕು ಹಾಕಿದ್ದಾರೆ. ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ (Karnataka State Film Awards) ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಈ ರಾಜ್ಯದಲ್ಲಿ ಕಲಾರಂಗವನ್ನು ನೀನು ಆಳುತ್ತೀಯ. ಒಂದು ವೇಳೆ ಈ ಮಾತು ನಿಜವಾಗದೇ ಇದ್ದರೆ ನೀನು ನನ್ನ ಮಗನೇ ಅಲ್ಲ ಅಂತ ಅಂದುಕೋ ಎಂದು ಅಪ್ಪಾಜಿಗೆ ನಮ್ಮ ತಾತ ಹೇಳಿದ್ದರು’ ಎಂದಿದ್ದಾರೆ ರಾಘವೇಂದ್ರ ರಾಜ್​ಕುಮಾರ್​. ಡಾ. ರಾಜ್​ಕುಮಾರ್​ ಅವರ ಹುಟ್ಟುಹಬ್ಬದ ದಿನವೇ (ಏ.24) ರಾಜ್ಯ ಪ್ರಶಸ್ತಿಗಳನ್ನು ನೀಡಿರುವುದು ತಮಗೆ ಖುಷಿ ನೀಡಿದೆ ಎಂದು ಅವರು ಹೇಳಿದರು.

TV9 Kannada


Leave a Reply

Your email address will not be published.