ಡಾ. ರಾಜ್​ಕುಮಾರ್​ಗೆ ಅವಮಾನ: ಗೂಗಲ್​ನಲ್ಲಿ ರಿಪೋರ್ಟ್​ ಮಾಡಿ ಎಂದ ರಿಷಬ್​ ಶೆಟ್ಟಿ

ಡಾ. ರಾಜ್​ಕುಮಾರ್​ಗೆ ಅವಮಾನ: ಗೂಗಲ್​ನಲ್ಲಿ ರಿಪೋರ್ಟ್​ ಮಾಡಿ ಎಂದ ರಿಷಬ್​ ಶೆಟ್ಟಿ

ಗೂಗಲ್​ ಸರ್ಚ್​ನಲ್ಲಿ ತಮಿಳಿನ ವಿಕ್ರಮ್ ವೇದ ಸಿನಿಮಾ ತಂಡದ ಬಗ್ಗೆ ಸರ್ಚ್ ಮಾಡಿದ್ರೆ ಅದ್ರಲ್ಲಿ ರಾಜ್​ ಕುಮಾರ್ ಅವರ ಫೋಟೋ ಕಾಣಿಸುತ್ತಿದೆ. ಅವರು ಸಿನಿಮಾದಲ್ಲಿ ಅರೆಬೆಂದ(HALF BOIL) ಪಾತ್ರವೊಂದರಲ್ಲಿ ನಟಿಸಿದ್ದಾರೆ ಎಂಬಂತೆ ಮಾಹಿತಿ ತೋರಿಸುತ್ತಿದೆ.

ಈ ವಿಚಾರವಾಗಿ ಕ್ರೋಶ ಹೊರಹಾಕಿರುವ ನಟ, ನಿರ್ದೇಶಕ​ ರಿಷಬ್​​ ಶೆಟ್ಟಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಪೋಸ್ಟ್​ ಹಾಕಿದ್ದು. ‘‘ಎಲ್ಲರಲ್ಲೂ ಒಂದು ಮನವಿ, ವಿಕ್ರಂ ವೇದ ತಮಿಳು ಚಿತ್ರದ ಗೂಗಲ್ ಪುಟದಲ್ಲಿ ನಮ್ಮ ಡಾ. ರಾಜಕುಮಾರ್ ಅವರ ಫೋಟೋ ಬೇರೆ ಹೆಸರಿನಲ್ಲಿ (half boil) ಅಂತ ನಮೂದಿಸಲಾಗಿದೆ, ದಯಮಾಡಿ ಅದನ್ನು ಗೂಗಲ್ ಗೆ report ಮಾಡಿ, ತಪ್ಪು ಸರಿ ಹೋಗಲಿ’’ ಅಂತ ಬರೆದುಕೊಂಡಿದ್ದಾರೆ.

ಈಗಾಗ್ಲೇ ಸಾಕಷ್ಟು ಸಿನಿಮಾಮಂದಿ, ಕಲಾವಿದರು, ಅಭಿಮಾನಿಗಳು ಹೆಚ್ಚಾಗಿ ಎಲ್ಲಾ ಕನ್ನಡಿಗರು ಈ ಬಗ್ಗೆ ಗೂಗಲ್​ನಲ್ಲಿ ರಿಪೋರ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಕಣ್ಮಣಿ ಡಾ.ರಾಜ್​ ಕುಮಾರ್​ಗೆ ಗೂಗಲ್​ನಿಂದ ಅವಮಾನ? ಇದು ತಮಿಳು ಚಿತ್ರದ ಯಡವಟ್ಟಾ?

 

The post ಡಾ. ರಾಜ್​ಕುಮಾರ್​ಗೆ ಅವಮಾನ: ಗೂಗಲ್​ನಲ್ಲಿ ರಿಪೋರ್ಟ್​ ಮಾಡಿ ಎಂದ ರಿಷಬ್​ ಶೆಟ್ಟಿ appeared first on News First Kannada.

Source: newsfirstlive.com

Source link