ಅಭಿಮಾನಿ ದೇವರುಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ 11 ದಿನ.
ಪುನೀತ್ ಸಮಾಧಿ ದರ್ಶನ ಪಡೆಯಲು ಜನಸಾಗರವೇ ಹರಿದಿ ಬರ್ತಿದ್ದು, ಅಪ್ಪು ಅಜರಾಮರ ಎಂದು ಸಾರಿ ಹೇಳ್ತಿದ್ದಾರೆ. ಈ ಸಂದರ್ಭದಲ್ಲಿ ದೊಡ್ಮನೆ ಕುಟುಂಬ ಅಪ್ಪು ಪುಣ್ಯಸ್ಮರಣೆ ನಡೆಸ್ತಿದೆ.
ಪುಷ್ಪಾಲಂಕೃತಗೊಂಡ ಅಪ್ಪು ಸಮಾಧಿ
ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಯನ್ನು ಪುಣ್ಯಸ್ಮರಣೆ ನಿಮಿತ್ತ ಬಗೆ ಬಗೆಯ ಹೂಗಳಿಂದ ಅಲಂಕಾರಗೊಳಿಸಲಾಗಿದೆ. ಸಮಾಧಿ ಸುತ್ತಮುತ್ತ ಸಂಪೂರ್ಣ ಹೂಗಳಿಂದ ಅಲಂಕಾರಗೊಳಿಸಲಾಗಿದೆ.
ಚಿಕ್ಕ ಮಂಟಪವನ್ನು ಸಮಾಧಿ ಬಳಿ ನಿರ್ಮಿಸಲಾಗಿದ್ದು, ಪವರ್ಸ್ಟಾರ್ ಹೆಸರಿಗೆ ತಕ್ಕಂತೆ ಹೂವಿನಲ್ಲಿ ಸ್ಟಾರ್ ಚಿನ್ಹೆ ಮಾಡಿ ಅದರಲ್ಲಿ ಅಪ್ಪು ಭಾವಚಿತ್ರ ಇರಿಸಲಾಗಿದೆ.
ಕಂಠೀರವ ಸ್ಟುಡಿಯೋಗೆ ಬಂದಿಳಿದ ಕುಟುಂಬಸ್ಥರು
ಇನ್ನು ಅಪ್ಪು ಕುಟುಂಬಸ್ಥರು ಸ್ಟುಡಿಯೋಗೆ ಬಂದಿಳಿದಿದ್ದಾರೆ. ಅಪ್ಪು ಪತ್ನಿ ಅಶ್ವಿನಿ, ಮಕ್ಕಳು, ರಾಘವೇಂದ್ರ ರಾಜಕುಮಾರ್ ಮಕ್ಕಳು ಸೇರಿದಂತೆ ಅವರ ಬಂಧುಗಳು ಬಸ್ ಹಾಗೂ ಕಾರಿನಲ್ಲಿ ಸಮಾಧಿ ಸ್ಥಳಕ್ಕೆ ಬಂದಿದ್ದಾರೆ.
ಸ್ಟುಡಿಯೋದಲ್ಲಿ ಭಾರಿ ಬಿಗಿಭದ್ರತೆ
ಅಪ್ಪು 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆ ಕಂಟೀರವ ಸ್ಟುಡಿಯೋದಲ್ಲಿ ಭಾರೀ ಬಿಗಿ ಭದ್ರತೆ ಮಾಡಲಾಗಿದೆ. ಇನ್ನು ಇವತ್ತು ಪುಣ್ಯಸ್ಮರಣೆ ಕಾರ್ಯ ಮುಗಿಯುವರೆಗೆ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.
ಯಾರಿಗೆಲ್ಲ ಅವಕಾಶ?
ಪುಣ್ಯಸ್ಮರಣೆ ಕಾರ್ಯದಲ್ಲಿ ಕುಟುಂಬದವರು ಮತ್ತು ಕೆಲ ಪ್ರಮುಖ ಕಲಾವಿದರಿಗೆ ಮತ್ತು ಗಣ್ಯವ್ಯಕ್ತಿಗಳಿಗೆ ಮಾತ್ರ ಅವಕಾಶ ಇದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
The post ಡಾ.ರಾಜ್ ಕುಟುಂಬದಿಂದ ಅಪ್ಪು ಸಮಾಧಿಗೆ ವಿಶೇಷ ಪೂಜೆ; ಚಿತ್ರರಂಗದ ಗಣ್ಯರು ಭಾಗಿ appeared first on News First Kannada.