ರಾಷ್ಟ್ರ ಪ್ರಶಸ್ತಿ ವಿಜೇತ ನಟ, ಹೃದಯವಂತ ಸಂಚಾರಿ ವಿಜಯ್ ಬದುಕಿನ ಬಂಡಿಯ ಸಂಚಾರವನ್ನು ಅರ್ಧಕ್ಕೆ ನಿಲ್ಲಿಸಿ, ಬಾರದ ಲೋಕಕ್ಕೆ ಹೋಗಿದ್ದಾರೆ. ಬದುಕಿದ್ದ ಕಡಿಮೆ ಅವಧಿಯಲ್ಲಿ ಸಾಕಷ್ಟು ಸಾಧಿಸಿದ್ದ ಸಂಚಾರಿ ವಿಜಯ್.. ಸಾವಿನ ನಂತರವೂ ಬದುಕಿರುವಂಥ ಕೆಲಸ ಮಾಡಿದ್ದಾರೆ. ಸಿನಿಮಾ, ರಂಗಭೂಮಿ ಮಾತ್ರವಲ್ಲದೆ.. ಹಸಿದವರು, ಬಡವರ ಕಷ್ಟಕ್ಟೆ ವಿಜಯ್ ಮಿಡಿಯುತ್ತಿದ್ದರು. ಕೊರೊನಾ ಲಾಕ್​ ಡೌನ್ ಸಂದರ್ಭದಲ್ಲಿ ತನ್ನ ಕಾರನ್ನ ಸೇಲ್ ಮಾಡಿ ಬಡವರಿಗೆ ಸಹಾಯ ಮಾಡಿದ್ದ ವಿಜಯ್​ ಸಾವಿನ ನಂತರ 5 ಜನರ ಬಾಳಿಗೆ ಬೆಳಕಾಗಿದ್ದಾರೆ.

ನೋವಿನಲ್ಲೂ ವಿಜಯ್ ಅವರ ದೇಹದ ಅಂಗಾಂಗಗಳನ್ನು ದಾನ ಮಾಡಲು ವಿಜಯ್​ ಕುಟುಂಬದವ್ರು ನಿರ್ಧರಿಸಿದ್ರು. ಇದರಿಂದ ಕತ್ತಲೆಯ ಬದುಕಿನಲ್ಲಿದ್ದ ಇಬ್ಬರು ಅಂಧರಿಗೆ ಬೆಳಕು ಸಿಕ್ಕಿದೆ. ಅಲ್ಲದೆ ಅವರ ಕಿಡ್ನಿಯನ್ನು ಸಹ ಈಗಾಗಲೇ ಬೇರೊಬ್ಬರಿಗೆ ಕಸಿ ಮಾಡಲಾಗಿದೆ. ಇದರ ಮೂಲಕ ಸಂಚಾರಿ ವಿಜಯ್ ಮಾನವೀಯತೆಯ ಮೂರ್ತಿ ಡಾ. ರಾಜ್​ಕುಮಾರ್, ಪರಸಂಗದ ಗೆಡ್ಡೆ ತಿಮ್ಮ ಖ್ಯಾತಿಯ ಲೋಕೇಶ್ ಅವರ ಹಾದಿಯಲ್ಲೇ ಸಾಗಿದ್ದಾರೆ. ಆ ಮೂಲಕ ಸಾವಿನ ನಂತರವೂ ನಮ್ಮ ಮಧ್ಯೆ ಬದುಕಿದ್ದಾರೆ.

ಹೌದು ಡಾ. ರಾಜ್​ಕುಮಾರ್ ನೇತ್ರದಾನ ಮಹಾದಾನ ಎಂದು ಸಾರಿದ್ದರು. ಅಲ್ಲದೇ ತಮ್ಮ ಕಣ್ಣುಗಳನ್ನು ದಾನ ಮಾಡಿ ನುಡಿದಂತೆ ನಡೆದಿದ್ರು. ಅದೇ ರೀತಿ ನಟ ಲೋಕೇಶ್ ಅವರು ಕೂಡ ತಮ್ಮ ದೇಹವನ್ನು ಸಂಪೂರ್ಣವಾಗಿ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಈಗ ಅದೇ ರೀತಿ ಸಂಚಾರಿ ವಿಜಯ್ ಅವರು ಬದುಕಿದ್ದಗಾಲೂ ಸಮಾಜದ ಕಷ್ಟಕ್ಕೆ ಮರುಗುತ್ತಿದ್ದರು. ಸಾವಿನ ನಂತರವೂ ಅವರ ಅಂಗಾಗ ದಾನ ಮಾಡುವ ಮೂಲಕ ನಮ್ಮ ಮಧ್ಯೆ ಬದುಕಿದ್ದಾರೆ.

The post ಡಾ.ರಾಜ್ ಕುಮಾರ್, ಲೋಕೇಶ್ ಹಾದಿಯಲ್ಲೇ ಸಾಗಿದ ನಟ ಸಂಚಾರಿ ವಿಜಯ್ appeared first on News First Kannada.

Source: newsfirstlive.com

Source link