ಡಾ. ರಾಜ್​ ಭೇಟಿ ಮಾಡಿದ್ದ ದ್ರಾವಿಡ್​, ಶ್ರೀನಾಥ್​, ಕುಂಬ್ಳೆ; ಅಪರೂಪದ ಮಾಹಿತಿ ತೆರೆದಿಟ್ಟ ರಾಘಣ್ಣ | Rahul Dravid Anil Kumble Javagal Srinath once visited Dr Rajkumar homeRaj Cup: ಅಂದಿನ ಟೀಮ್​ ಇಂಡಿಯಾ ಆಟಗಾರರಾದ ದ್ರಾವಿಡ್​, ಶ್ರೀನಾಥ್​, ಅನಿಲ್​ ಕುಂಬ್ಳೆ ಮುಂತಾದವರು ಡಾ. ರಾಜ್​ಕುಮಾರ್​ ನಿವಾಸಕ್ಕೆ ಬಂದಿದ್ದರು. ಆ ಘಟನೆಯನ್ನು ರಾಘವೇಂದ್ರ ರಾಜ್​ಕುಮಾರ್​ ಮೆಲುಕು ಹಾಕಿದ್ದಾರೆ.

TV9kannada Web Team


| Edited By: Madan Kumar

Jun 02, 2022 | 9:45 AM
ಕ್ರಿಕೆಟ್​ ಮತ್ತು ಸಿನಿಮಾರಂಗದ ನಡುವೆ ಮೊದಲಿನಿಂದಲೂ ನಂಟು ಇದೆ. ಡಾ. ರಾಜ್​ಕುಮಾರ್​ (Dr Rajkumar) ಅವರಿಗೂ ಕ್ರಿಕೆಟ್​ ಬಗ್ಗೆ ಆಸಕ್ತಿ ಇತ್ತು. ತಮ್ಮ ಬದುಕಿನ ಕೊನೇ ದಿನಗಳಲ್ಲಿ ಅವರು ಹೆಚ್ಚಾಗಿ ಕ್ರಿಕೆಟ್​ ನೋಡುತ್ತಿದ್ದರು. ಆಗ ಟೀಮ್​ ಇಂಡಿಯಾ ಆಟಗಾರರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ರಾಹುಲ್​ ದ್ರಾವಿಡ್ (Rahul Dravid)​, ಜಾವಗಲ್​ ಶ್ರೀನಾಥ್​, ಅನಿಲ್​ ಕುಂಬ್ಳೆ ಮುಂತಾದವರು ಅಣ್ಣಾವ್ರ ನಿವಾಸಕ್ಕೆ ಬಂದಿದ್ದರು ಎಂಬ ಮಾಹಿತಿಯನ್ನು ರಾಘವೇಂದ್ರ ರಾಜ್​ಕುಮಾರ್​ (Raghavendra Rajkumar) ಅವರು ಹಂಚಿಕೊಂಡಿದ್ದಾರೆ. ಡಾ. ರಾಜ್​ ಮತ್ತು ಕ್ರಿಕೆಟಿಗರ ನಡುವೆ ಅಂದು ನಡೆದ ಮಾತುಕತೆ ಏನು ಎಂಬುದನ್ನು ಕೂಡ ರಾಘಣ್ಣ ವಿವರಿಸಿದ್ದಾರೆ. ರಾಜ್ ಕಪ್ ಸೀಸನ್-5ರ ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ವಿಚಾರ ತೆರೆದಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಸ್ಟಾರ್​ ಕಲಾವಿದರು ಈ ಟೂರ್ನಿಯಲ್ಲಿ ಆಟವಾಡಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.


TV9 Kannada


Leave a Reply

Your email address will not be published. Required fields are marked *