ನವದೆಹಲಿ: ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕೊಡಲು ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಅಭಿವೃದ್ಧಿಪಡಿಸಿರುವ ಆಂಟಿ ಕೋವಿಡ್ ಔಷಧಿ ಇಂದು ಬಿಡುಗಡೆಯಾಗಲಿದೆ.

ಡಿಆರ್‌ಡಿಒ ಆಂಟಿ ಕೋವಿಡ್ ಔಷಧ 2-ಡಿಆಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಎಂಬ ಔಷಧಿಯನ್ನು ಡಿಆರ್‌ಡಿಒ ಅಭಿವೃದ್ಧಿ ಪಡಿಸಿದ್ದು, ಈ ಔಷಧಿಗೆ ಇತ್ತೀಚೆಗಷ್ಟೇ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿತ್ತು. ಈ ಔಷಧಿ ಕೋವಿಡ್ ರೋಗಿಗಳ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ವೈದ್ಯಕೀಯ ಆಮ್ಲಜನಕದ ಮೇಲಿನ ಅವಲಂಬೆನಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಎರಡು ಹಂತಗಳಲ್ಲಿ ಆಂಟಿ ಕೋವಿಡ್ ಔಷಧಿಯನ್ನು ಸಂಶೋಧನೆ ನಡೆಸಲಾಗಿದೆ. ಗ್ಲೂಕೋಸ್‍ನ ಜೆನೆರಿಕ್ ಅಣು ಆಗಿರುವುದರಿಂದ ಇದನ್ನು ಸುಲಭವಾಗಿ ಉತ್ಪಾದಿಸಬಹುದು ಮತ್ತು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಿಸಬಹುದು ಎಂದು ಡಿಆರ್‌ಡಿಒ ತಿಳಿಸಿತ್ತು. ಹೈದರಾಬಾದ್?ನ ಡಾ. ರೆಡ್ಡೀಸ್ ಲ್ಯಾಬ್? ಡಿಆರ್?ಡಿಓ ಜೊತೆ ಈ ಔಷಧ ಉತ್ಪಾದನೆಯ ಪಾಲುದಾರ ಸಂಸ್ಥೆಯಾಗಿದೆ.

The post ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಆ್ಯಂಟಿ ಕೋವಿಡ್ ಔಷಧಿ ಇಂದು ಬಿಡುಗಡೆ appeared first on News First Kannada.

Source: newsfirstlive.com

Source link