ಬೆಂಗಳೂರು: ಕೊಲೆ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಗೆ ಡಿ.ಕೆ.ಶಿವಕುಮಾರ್​ ಸಲ್ಲಿಸಿದ್ದ ಅರ್ಜಿಯನ್ನ ಸಿಟಿ ಸಿವಿಲ್​ ಕೋರ್ಟ್ ತಿರಸ್ಕಾರ ಮಾಡಿದೆ.

ಕೊರೊನಾ ಕಾರಣಕ್ಕೆ ನೇರ ಭೇಟಿಗೆ ಅವಕಾಶವಿಲ್ಲ. ಕುಟುಂಬದವರು ಹಾಗೂ ವಕೀಲರಿಗೆ ಅವಕಾಶವಿಲ್ಲ. ಕೇವಲ ಟೆಲಿಪೋನ್ ಮೂಲಕ ಮಾತುಕತೆಗೆ ಅವಕಾಶ ನೀಡಲಾಗುತ್ತೆ ಅಂತ ಕೋರ್ಟ್​ಗೆ ಜೈಲಾಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ, ಕೋರ್ಟ್​ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಗೆ ನಕಾರ ಎತ್ತಿದೆ.

ಡಿ.ಕೆ. ಶಿವಕುಮಾರ್ ಹಾಗೂ ವಿನಯ್​ಗೆ 20 ವರ್ಷಗಳ ಸಂಬಂಧವಿದೆ. ಅಲ್ಲದೇ ಇಬ್ಬರೂ ಒಂದೇ ಪಾರ್ಟಿಯಲ್ಲಿ ಕೆಲಸ ಮಾಡ್ತಿದ್ದೇವೆ. ಹೀಗಾಗಿ ವಿನಯ್ ಭೇಟಿಗೆ ಅವಕಾಶ ಕೊಡಿ ಅಂತ ಜೈಲಿಗೆ ಮನವಿ ಮಾಡಿದ್ದರು. ಆದ್ರೆ, ಜೈಲಾಧಿಕಾರಿಗಳು ಅದನ್ನ ತಿರಸ್ಕರಿಸಿದ್ದರು, ಹೀಗಾಗಿ ಡಿ ಕೆ ಶಿವಕುಮಾರ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಆ ಅರ್ಜಿಯೂ ವಜಾಗೊಂಡಿದೆ.

The post ಡಿಕೆಎಸ್​ಗೆ ಹಿನ್ನಡೆ: ವಿನಯ್ ಕುಲಕರ್ಣಿ​ ಭೇಟಿಗೆ ಸಲ್ಲಿಸಿದ್ದ ಅರ್ಜಿ ವಜಾ.. ಕೋರ್ಟ್ ಹೇಳಿದ್ದೇನು..? appeared first on News First Kannada.

Source: newsfirstlive.com

Source link