ಡಿಕೆಎಸ್​ ಕಾರ್​ ಅಡ್ಡಗಟ್ಟಿ ಧಿಕ್ಕಾರ ಕೂಗಿದ ಪ್ರತಿಭಟನಾಕರರು.. ನಡೆದಿದ್ದೇನು..?

ಡಿಕೆಎಸ್​ ಕಾರ್​ ಅಡ್ಡಗಟ್ಟಿ ಧಿಕ್ಕಾರ ಕೂಗಿದ ಪ್ರತಿಭಟನಾಕರರು.. ನಡೆದಿದ್ದೇನು..?

ಬಾಗಲಕೋಟೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಮುಧೋಳ ನಗರಕ್ಕೆ ಭೇಟಿ ನೀಡಿದ್ದ ವೇಳೆ ಮುಧೋಳ ದಲಿತ ಸಂಘಟನೆಗಳು ಡಿಕೆಎಸ್​ ವಿರುದ್ಧ ಘೋಷಣೆಗಳನ್ನು ಕೂಗಿದ ಘಟನೆ ಮುಧೋಳ ನಗರದಲ್ಲಿ ನಡೆದಿದೆ.

ಕೂಗಿದ ಕರ್ನಾಟಕ ಮಾದಿಗ ಮಹಾಸಭಾ ಕಾರ್ಯಕರ್ತರು ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದ್ದು ಸದಾಶಿವ ಆಯೋಗ ಜಾರಿ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ದ್ವಂದ್ವ ನಿಲುವು ಸೃಷ್ಟಿಸಿದ್ದಾರೆಂದು ಆರೋಪಿಸಿದ್ದಾರೆ. ಮುಧೋಳ- ಬಾಗಲಕೋಟೆಗೆ ತೆರಳುವ ರಸ್ತೆ ಮಧ್ಯೆ ವಾಹನ ತಡೆದು ಪ್ರತಿಭಟನಾಕಾರರು ಧಿಕ್ಕಾರ ಕೂಗಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.

ಧಿಕ್ಕಾರ ಕೂಗುವ ಜನರಿದ್ದ ಕಾರಣ ಕಾರು ನಿಲ್ಲಿಸಿ ಡಿ.ಕೆ. ಶಿವಕುಮಾರ್ ಸಮಸ್ಯೆ ಆಲಿಸಿದ್ದಾರೆ.. ಸದಾಶಿವ ಆಯೋಗದ ವರದಿ ಜಾರಿಗಾಗಿ ಆಗ್ರಹಿಸಿ ನಿಮ್ಮ ನಿಲುವು ಸ್ಪಷ್ಟಪಡಿಸಿ ಎಂದು ಕಾರ್ಯಕರ್ತರು ಈ ವೇಳೆ ಪಟ್ಟು ಹಿಡಿದಿದ್ದಾರೆ. ಸದಾಶಿವ ಆಯೋಗ ಜಾರಿಗೆ ತರಲು ಮೊದಲು ಹೇಳಿದ್ದೇ ನಾವು ಎಂದು ಡಿಕೆಎಸ್​ ಸಮಜಾಯಿಸಿ ನೀಡಿದ್ದಾರೆ.. ಇದಕ್ಕೆ ಒಂದೇ ವರ್ಗವನ್ನ ಓಲೈಕೆ ಮಾಡ್ತಿದ್ದೀರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಸದಾಶಿವ ಆಯೋಗದ ವರದಿ ಪರಿಶೀಲಿಸಿ ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.

ಎಲ್ಲ ಜಾತಿಯ ಹಾಗೂ ವರ್ಗದ ಜನ್ರನ್ನ ಓಲೈಸುವ ಕೆಲಸ ನಾವು ಮಾಡ್ತೇವೆಂದು ಪ್ರತಿಭಟನಾಕಾರರನ್ನ ಡಿಕೆ ಶಿವಕುಮಾರ್ ಸಮಾಧಾನಿಸಿದ್ದಾರೆ. ನಂತರ ಪ್ರತಿಭಟನಾಕಾರರಿಗೆ ಡಿಕೆ ಶಿವಕುಮಾರ್​ಗೆ ಜೈ ಎನ್ನಿ ಎಂದು ಮಹ್ಮದ್ ನಲಪಾಡ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

The post ಡಿಕೆಎಸ್​ ಕಾರ್​ ಅಡ್ಡಗಟ್ಟಿ ಧಿಕ್ಕಾರ ಕೂಗಿದ ಪ್ರತಿಭಟನಾಕರರು.. ನಡೆದಿದ್ದೇನು..? appeared first on News First Kannada.

Source: newsfirstlive.com

Source link