ಡಿಕೆಶಿಗೆ ತೀವ್ರ ಹಿನ್ನಡೆ.. ಪದಾಧಿಕಾರಿಗಳ ಪಟ್ಟಿ ನೀಡುವಂತೆ ಸಿದ್ದರಾಮಯ್ಯಗೆ ಹೈ ಕಮಾಂಡ್ ಸೂಚನೆ

ಡಿಕೆಶಿಗೆ ತೀವ್ರ ಹಿನ್ನಡೆ.. ಪದಾಧಿಕಾರಿಗಳ ಪಟ್ಟಿ ನೀಡುವಂತೆ ಸಿದ್ದರಾಮಯ್ಯಗೆ ಹೈ ಕಮಾಂಡ್ ಸೂಚನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್​​​ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಜೋರಾಗಿರುವ ನಡುವೆಯೇ ನೂತನ ಪದಾಧಿಕಾರಿಗಳ ಆಯ್ಕೆ ಕುರಿತಂತೆ ಪಟ್ಟಿ ಕಳುಹಿಸಿಕೊಡಲು ಕಾಂಗ್ರೆಸ್​​ ಹೈಕಮಾಂಡ್​ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದೆ.

ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಿ ಪಕ್ಷದ ವರಿಷ್ಠರ ಜೊತೆಗೆ ಮಾತುಕತೆ ನಡೆಸಿದ್ದರು. ಶಿವಕುಮಾರ್ ಅವರ ಭೇಟಿ ಬೆನ್ನಲ್ಲೇ ಪದಾಧಿಕಾರಿಗಳ ಆಯ್ಕೆಗೆ ಪಟ್ಟಿ ಕಳುಹಿಸಿಕೊಡಿ ಎಂದು ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡುವ ಮೂಲಕ ಪದಾಧಿಕಾರಿಗಳ ಆಯ್ಕೆ ಕುರಿತಂತೆ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್​ ವಿಶ್ವಾಸಕ್ಕೆ ತೆಗೆದುಕೊಂಡಿದೆ.

ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಪರಮಾಧಿಕಾರವಿದ್ದರೂ ಕೂಡ ಕಾಂಗ್ರೆಸ್​ ವರಿಷ್ಠರು ಸಿಎಲ್​ಪಿ ನಾಯಕನ ಮೊರೆ ಹೋಗಿದೆ. ಪಕ್ಷದಲ್ಲಿ ಮುಂದಿನ ಸಿಎಂ ಹೇಳಿಕೆಯಿಂದ ಉಂಟಾಗಿರುವ ಗೊಂದಲ ಕಾರಣಕ್ಕೆ ಹೈಕಮಾಂಡ್​ ಸಿದ್ದರಾಮಯ್ಯರನ್ನ ವಿಶ್ವಾಸಕ್ಕೆ ತೆಗೆದುಕೊಂಡಿದೆ ಎನ್ನಲಾಗಿದೆ. ಸದ್ಯ ವರಿಷ್ಠರ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರು ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.

The post ಡಿಕೆಶಿಗೆ ತೀವ್ರ ಹಿನ್ನಡೆ.. ಪದಾಧಿಕಾರಿಗಳ ಪಟ್ಟಿ ನೀಡುವಂತೆ ಸಿದ್ದರಾಮಯ್ಯಗೆ ಹೈ ಕಮಾಂಡ್ ಸೂಚನೆ appeared first on News First Kannada.

Source: newsfirstlive.com

Source link