ಬೆಂಗಳೂರು: ಇಂದು ಬೆಂಗಳೂರು ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ನಡೆದ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯಕರ್ತರ ವಿರುದ್ದ ಗರಂ ಆದ ಪ್ರಸಂಗ ಕಂಡು ಬಂತು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಷಣ ಮಾಡಲು ಮುಂದಾಗಿದ್ದರು. ಈ ವೇಳೆ ಕಾರ್ಯಕರ್ತರು ಡಿಕೆ.. ಡಿಕೆ.. ಎಂದು ಕೂಗಿದರು. ಆಗ ಕೈ ಕಾರ್ಯಕರ್ತರ ವಿರುದ್ಧ ಗರಂ ಆದ ಡಿ.ಕೆ ಶಿವಕುಮಾರ್ ಡಿಕೆ.. ಡಿಕೆ.. ಎಂದು ಕೂಗೋರೆಲ್ಲ ಹೊರಗೆ ಹೋಗಿ ಎಂದರು.
ಇನ್ನು, ಡಿಕೆ.. ಡಿಕೆ.. ಎಂದು ನೀವು ಪಕ್ಷಕ್ಕೆ ದ್ರೋಹ ಮಾಡ್ತಿದೀರಿ. ವ್ಯಕ್ತಿ ಪೂಜೆ ಮಾಡಬೇಡಿ ಅಂತ ನಾನೇ ಹೇಳಿದ್ದೀನಿ. ಇಲ್ಲಿ ಯಾವ ಹೆಸರೂ ಇರಬಾರದು, ಕೇವಲ ಕಾಂಗ್ರೆಸ್ ಎಂಬುದೊಂದೇ ಇರಬೇಕು. ಕೂಗೋದಿದ್ದರೆ ಹೊರಗೆ ಹೋಗಿ ಕೂಗಿ ಅಂತ ಕಾರ್ಯಕರ್ತರ ವಿರುದ್ದವೇ ಡಿಕೆ ಶಿವಕುಮಾರ್ ಗರಂ ಆಗಿದ್ದರು.
ಇದನ್ನೂ ಓದಿ: ಪ್ಯಾನ್ ಇಂಡಿಯಾ ‘ಪುಷ್ಪ’ದಲ್ಲಿ ಐಟಂ ಸಾಂಗ್ಗೆ ಸೊಂಟ ಬಳುಕಿಸ್ತಾರಾ ಸಮಂತಾ?
The post ಡಿಕೆ.. ಡಿಕೆ.. ಎಂದು ಜೈಕಾರ ಹಾಕಿದ ಕಾರ್ಯಕರ್ತರಿಗೆ “ಹೊರಗೆ ನಡೀರಿ” ಎಂದು DKS ಗರಂ ಆಗಿದ್ದೇಕೆ? appeared first on News First Kannada.