ಬೆಂಗಳೂರು: ತಮಿಳುನಾಡಿನ ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷದ ನಾಯಕರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರ ಮನೆಗೆ ಭೇಟಿ ನೀಡಿದ್ದಾರೆ.

ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿ ಒಂದು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆ ತಮಿಳುನಾಡಿನ ಹೊಸೂರು ಶಾಸಕ ವೈ. ಪ್ರಕಾಶ್, ಮಾಜಿ ಶಾಸಕರಾದ ಎಸ್.ಎ. ಸತ್ಯ, ಆರ್.ಕೆ. ರಮೇಶ್ ಹಾಗೂ ಬಾಬು ರೆಡ್ಡಿ ಸೇರಿದಂತೆ ಹಲವರು ಶುಭಾಶಯ ಕೋರಲು ಬಂದಿದ್ದಾರೆ. ಅವರ ಸನ್ಮಾನ ಸ್ವೀಕರಿಸಿ ಶಿವಕುಮಾರ್ ಕೆಲಕಾಲ ಮುಖಂಡರೊಂದಿಗೆ ಚರ್ಚೆ ನಡೆಸಿದ್ರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೈ. ಪ್ರಕಾಶ್ ಪರ ಡಿ.ಕೆ ಶಿವಕುಮಾರ್ ಪ್ರಚಾರ ನಡೆಸಿದ್ದರು. ಚುನಾವಣೆಯಲ್ಲಿ ಗೆದ್ದ ಹಿನ್ನಲೆಯಲ್ಲಿ ಡಿ.ಕೆ ಶಿವಕುಮಾರ್ ಗೆ ಆಭಿನಂದನೆ ಸಲ್ಲಿಸಲು ವೈ ಪ್ರಕಾಶ್ ಆಗಮಿಸಿದ್ದಾರೆ ಎನ್ನಲಾಗಿದೆ.

The post ಡಿಕೆ ಶಿವಕುಮಾರ್ ಮನೆಗೆ ತಮಿಳುನಾಡು ಡಿಎಂಕೆ ನಾಯಕರ ಭೇಟಿ appeared first on News First Kannada.

Source: newsfirstlive.com

Source link