ಬೆಂಗಳೂರು: ಮಾರಕ ಕೋವಿಡ್​​-19 ಎರಡನೇ ಅಲೆ ಬಳಿಕ ಪರೀಕ್ಷೆ ವಿನಾಯ್ತಿ ನಿರೀಕ್ಷೆಯಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಕಹಿ ಸುದ್ದಿಯೊಂದಿದೆ. ರಾಜ್ಯದ 10ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ತಜ್ಞರ ಅಭಿಪ್ರಾಯದ ಮೇರೆಗೆ ಪರೀಕ್ಷೆ ನಡೆಸುವ ತೀರ್ಮಾನಕ್ಕೆ ಬಂದಿವೆ ಎಂದು ಉನ್ನತ ಮೂಲಗಳು ಹೇಳುತ್ತಿವೆ.

ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಈ ವರ್ಷ ಪರೀಕ್ಷೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಪರೀಕ್ಷೆ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಯಲಯ ಸೇರಿದಂತೆ ಎಲ್ಲಾ ವಿವಿಗಳ ಕುಲಪತಿಗಳು ತಿಳಿಸಿದ್ದಾರೆ.

ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸಲಹೆ ಮೇರೆಗೆ ಎಲ್ಲಾ ವಿವಿಗಳು ಪರೀಕ್ಷೆಗೆ ತಯಾರು ನಡೆಸಿಕೊಂಡಿವೆ. ಜುಲೈ ಎರಡನೇ ವಾರದಲ್ಲಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲು ಎಲ್ಲಾ ವಿವಿಗಳು ಮುಂದಾಗಿವೆ.

ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಕಡ್ಡಾಯ ಲಸಿಕೆ ತೆಗೆದುಕೊಳ್ಳಲೇಬೇಕು. ಎಲ್ಲಾ ಸೆಮ್​​ಗಳ ಪರೀಕ್ಷೆಗಳಿಗೂ ಒಂದು ವಿಷಯಕ್ಕೆ ಎಷ್ಟು ಗ್ಯಾಪ್​ ನೀಡಬೇಕೋ ಅಷ್ಟೇ ಕೊಟ್ಟು ಪರೀಕ್ಷೆ ನಡೆಸಲು ವಿವಿಗಳು ನಿರ್ಧಾರಕ್ಕೆ ಬಂದಿವೆ. ಸರ್ಕಾರ ಗ್ರೀನ್​​ ಸಿಗ್ನಲ್​​ ನೀಡಿದ ಕೂಡಲೇ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಗೆ ವಿವಿಗಳು ಚಿಂತನೆ ನಡೆಸಿವೆ ಎಂದು ತಿಳಿದು ಬಂದಿದೆ.

The post ಡಿಗ್ರಿ ವಿದ್ಯಾರ್ಥಿಗಳಿಗೆ ನಿರಾಸೆ​; ಯಾವುದೇ ಕಾರಣಕ್ಕೂ ಎಕ್ಸಾಂ ಕ್ಯಾನ್ಸಲ್​​ ಮಾಡಲ್ಲ ಎಂದ ಸರ್ಕಾರ appeared first on News First Kannada.

Source: newsfirstlive.com

Source link