ಹಾಸನ: ಡಿಟೊನೇಟರ್ ಸ್ಫೋಟಗೊಂಡು ಇಬ್ಬರು ಮಕ್ಕಳಿಗೆ ಗಾಯವಾಗಿರೋ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ತಿಮ್ಮೇನಹಳ್ಳಿಯಲ್ಲಿ ನಡೆದಿದೆ.

ಎತ್ತಿನಹೊಳೆ ಕಾಮಗಾರಿ ವೇಳೆ ಬೇಜವಾಬ್ದಾರಿತನದಿಂದ ಸ್ಫೋಟಕ ಬಿಟ್ಟು ಹೋಗಿರೋ ಆರೋಪ ಕೇಳಿ ಬಂದಿದೆ. ಬೇಕಾಬಿಟ್ಟಿಯಾಗಿ ಬಿಟ್ಟು ಹೋಗಿದ್ದ ಸ್ಪೋಟಕಗಳೊಂದಿಗೆ ಮಕ್ಕಳು ಆಟವಾಡುವ ವೇಳೆ ಡಿಟೋನೇಟರ್ ಸ್ಪೋಟವಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಅಭಿಷೇಕ್ ಹಾಗೂ ಕೃತಿಕಾ ಎಂಬ ಮಕ್ಕಳಿಗೆ ಗಾಯವಾಗಿದೆ. ಸದ್ಯ, ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ಡಿಟೊನೇಟರ್ ಸ್ಪೋಟ: ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೆ ಗಂಭೀರ ಗಾಯ appeared first on News First Kannada.

Source: newsfirstlive.com

Source link