
ಅಧಿಕಾರಿಗಳ ನಿರ್ಲಕ್ಷ್ಯ: ಬಸ್ ರಿಪೇರಿ ಮಾಡುವ ವೇಳೆ ಕೆಎಸ್ಆರ್ಟಿಸಿ ಮೆಕಾನಿಕ್ ದಾರುಣ ಸಾವು
ಬಸ್ ಕೆಳಗಡೆ ತುಂಡಾಗಿದ್ದ ಬುಷ್ ರಾಡ್ ಸರಿಪಡಿಸೋ ವೇಳೆ ಅವಘಡ ಸಂಭವಿಸಿದೆ. ರಾಡ್ ತುಂಡಾಗಿ ಕಾರ್ಮಿಕನ ಗಂಟಲಿಗೆ ಸಿಲುಕಿ ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ. ಮೃತ ಮಂಜುನಾಥ ಬಾದನಹಟ್ಟಿ ನಿವಾಸಿ.
ಬಳ್ಳಾರಿ: ಇಲ್ಲಿನ ಕುರುಗೋಡು KSTRC ಡಿಪೋದಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು ಮೆಕಾನಿಕ್ ದಾರುಣವಾಗಿ ಮೃತಪಟ್ಟಿದ್ದಾರೆ. ಇದಕ್ಕೆ ಡಿಪೋ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಮೆಕಾನಿಕ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಡಿಪೋದಲ್ಲಿ ಬಸ್ ರಿಪೇರಿ ಮಾಡುವ ವೇಳೆ ಸಂಭವಿಸಿದ ಅವಘಡದಲ್ಲಿ KSTRC ಮೆಕಾನಿಕ್ ಟಿ ಮಂಜುನಾಥ ದರುಂತ ಅಂತ್ಯ ಕಂಡಿದ್ದಾರೆ. ಬಸ್ ಕೆಳಗಡೆ ತುಂಡಾಗಿದ್ದ ಬುಷ್ ರಾಡ್ ಸರಿಪಡಿಸೋ ವೇಳೆ ಅವಘಡ ಸಂಭವಿಸಿದೆ. ರಾಡ್ ತುಂಡಾಗಿ ಕಾರ್ಮಿಕನ ಗಂಟಲಿಗೆ ಸಿಲುಕಿ ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ. ಮೃತ ಮಂಜುನಾಥ ಬಾದನಹಟ್ಟಿ ನಿವಾಸಿ. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ರ್ಯಾಂಪ್ ವ್ಯವಸ್ಥೆ ಕಲ್ಪಿಸದೇ ಮೆಕಾನಿಕ್ ಗೆ ರಿಪೇರಿ ಮಾಡಲು ಹೇಳಿದ್ದರಿಂದ ಈ ದುರಂತ ಸಂಭವಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.