ಡಿಪೋ ಮ್ಯಾನೇಜರ್​​ ಮುಂದೆಯೇ ವಿಷ ಕುಡಿದು ಬಿಎಂಟಿಸಿ ನೌಕರ ಆತ್ಮಹತ್ಯೆಗೆ ಯತ್ನ…

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಬಿಎಂಟಿಸಿ ಕೆಲಸದಿಂದ ವಜಾಗೊಂಡ ನೌಕರ ಡಿಪೋ ಮ್ಯಾನೇಜರ್​​ ಮುಂದೆಯೇ ಸೂಸೈಡ್​​ಗೆ ಯತ್ನಿಸಿದ್ದಾರೆ.

ಇಂದಿರಾ ನಗರದ ಡಿಪೋ- 6ರಲ್ಲಿ ಡ್ರೈವರ್​​ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಏಪ್ರಿಲ್​​ ತಿಂಗಳಿನಲ್ಲಿ ನಡೆದ ಮುಷ್ಕರದ ವೇಳೆ ಈತ ಬಿಎಂಟಿಸಿ ಸೇವೆಯಿಂದ ವಜಾಗೊಂಡಿದ್ದ. ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದ್ದ ಕೇಶವ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈಗ ಸದ್ಯ ಈತನನ್ನು ಚಿಕಿತ್ಸೆಗಾಗಿ ಬೌರಿಂಗ್​​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಐಟಿ ದಾಳಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ -ಸಿಎಂ ಬೊಮ್ಮಾಯಿ

News First Live Kannada

Leave a comment

Your email address will not be published. Required fields are marked *