ಬೆಂಗಳೂರು: ಲಾಕ್​ಡೌನ್ ಜಾರಿಯಲ್ಲಿರೋ ಈ ಸಮಯದಲ್ಲಿ ಸವಾರರು ತಮ್ಮ ವಾಹನಗಳನ್ನ ಅನಾವಶ್ಯಕವಾಗಿ ರಸ್ತೆಗಿಳಿಸದೇ ಇರೋದೇ ಒಳ್ಳೆಯದು.. ಯಾಕಂದ್ರೆ ಪೊಲೀಸರು ಒಂದಲ್ಲ, ಎರಡಲ್ಲ ಮೂರು ಹಂತಗಳಲ್ಲಿ ಫೈನ್ ಹಾಕಲು ನಿಮಗಾಗಿ ಕಾದಿದ್ದಾರೆ.

ಎಸ್.. ಲಾಕ್​ಡೌನ್​ನಲ್ಲಿ ರಸ್ತೆಗಿಳಿದ ವೆಹಿಕಲ್​ಗಳಿಗೆ ಮೂರು ಸೆಕ್ಷನ್​ಗಳಡಿ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (NDMA) 51B, IPC 188 ಹಾಗೂ Crpc 200 ಅಡಿಯಲ್ಲಿ) ಫೈನ್ ಹಾಕಲಾಗ್ತಿದೆ.

ಮೊದಲ ಹಂತ
ಸವಾರರು ಸರಿಯಾದ ಕಾರಣವಿದ್ದು ಸಮಯ ಮುಗಿದ ಮೇಲೂ ರಸ್ತೆಯಲ್ಲಿ ಸಂಚರಿಸಿದ್ರೆ 500 ರೂ ದಂಡ ಹಾಕಲಾಗುತ್ತೆ. ಅಂಥವರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು (IA ನಂಬರ್ 09/2020 ಹೈಕೊರ್ಟ್ ಆದೇಶದಂತೆ) ವೆಹಿಕಲ್ ರಿಲೀಸ್ ಮಾಡಲಾಗುತ್ತದೆ.

ಎರಡನೇ ಹಂತ
NDMA ಹಾಗೂ Crpc 200 ಅಡಿ ವೆಹಿಕಲ್‌ ಸೀಜ್ ಆದ್ರೆ ಪೊಲೀಸರು ಪ್ರೈವೇಟ್ ಕಂಪ್ಲೇಂಟ್ ರಿಜಿಸ್ಟರ್ ಮಾಡ್ತಾರೆ. ಕಂಪ್ಲೇಂಟ್ ರಿಜಿಸ್ಟರ್ ಆದ ಮೇಲೆ ಕೋರ್ಟ್​ನಿಂದ ವಾಹನ ಮಾಲೀಕರಿಗೆ ಸಮನ್ಸ್ ಬರುತ್ತೆ. ಇಂಥವರ ವೆಹಿಕಲ್ಸ್ ರಿಲೀಸ್ ಆಗೋದು ಲಾಕ್​ಡೌನ್ ಅವಧಿ ಮುಗಿದ ಮೇಲೆ. ಹೀಗೆ ಕಂಪ್ಲೇಂಟ್ ದಾಖಲಿಸಿಕೊಂಡರೆ ಅಂಥವರಿಗೆ ಐನೂರು ರೂಪಾಯಿ ದಂಡ ಅಥವಾ 1 ತಿಂಗಳು ಜೈಲು ಶಿಕ್ಷೆ ವಿಧಿಸಬಹುದು. ಶಿಕ್ಷೆ ಹಾಗೂ ದಂಡದ ಪ್ರಮಾಣ ನ್ಯಾಯಾಧೀಶರ ವಿವೇಚನೆಗೆ ಬಿಟ್ಟಿದ್ದು.

ಮೂರನೇ ಹಂತ
Crpc 188 ಹಾಗೂ 51B ಅಡಿ ಕೇಸ್ ಬುಕ್ ಆದ್ರೆ ಪೊಲೀಸರು ನೇರವಾಗಿ FIR ದಾಖಲು ಮಾಡ್ತಾರೆ. ಐನೂರು ರೂಪಾಯಿ ದಂಡದ ಜೊತೆಗೆ ಹಳೇ ಟ್ರಾಫಿಕ್ ವಯೋಲೇಷನ್​ ಕೇಸ್ ಇದ್ರೆ ಅದರ ಫೈನ್​ನ್ನೂ ಕಟ್ಬೇಕು. ಚಾರ್ಜ್ ಶೀಟ್ ಆದಮೇಲೆ ಕೊರ್ಟ್​ನಲ್ಲಿ ಫೈನ್ ಕಟ್ಟಿದ ನಂತರ ಪೊಲೀಸರು ವಾಹನ ರಿಲೀಸ್ ಮಾಡ್ತಾರೆ. Crpc 188 ಹಾಗೂ 51 B ಅಡಿ ಚಾರ್ಜ್ ಶೀಟ್ ಆಗಲಿಕ್ಕೆ ಕನಿಷ್ಠ ಅಂದ್ರೂ 60 ದಿನಗಳಾಗುತ್ತೆ. ಅಲ್ಲಿವರೆಗೆ ನಿಮ್ಮ ವಾಹನ ಪೊಲೀಸರ ಬಳಿಯೇ ಇರಲಿದೆ.

 

ಸಭೆ ಸಮಾರಂಭ ಮಾಡಿದ್ರೆ ಕೇಸ್ ಬುಕ್
ಇನ್ನು ಲಾಕ್​ಡೌನ್ ಟೈಮ್​ನಲ್ಲಿ ಸಭೆ ಸಮಾರಂಭ ಮಾಡಿದ್ರೆ, ಮದ್ಯ ಮಾರಾಟ ಮಾಡಿದ್ರೆ, ಜನರನ್ನ ಗುಂಪುಗೂಡಿಸಿದ್ರೆ, ಜಾತ್ರೆಗಳನ್ನ ನಡೆಸಿದ್ರೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿರ್ವಹಣಾ ಕಾಯ್ದೆ ಹಾಗೂ ಸೆಕ್ಷನ್ 5(4) ಅಡಿಯಲ್ಲಿ ಕೇಸ್ ಬುಕ್ ಆಗುತ್ತೆ. ಈ ಕೇಸ್ ಬುಕ್ ಆದ್ರೆ ಅದು ಜಾಮೀನು ರಹಿತ ಪ್ರಕರಣವಾಗಿರುತ್ತದೆ. ಪೊಲೀಸರು ನೇರವಾಗಿ FIR ಮಾಡಿ ನ್ಯಾಯಾಧೀಶರ ‌ಮುಂದೆ ಹಾಜರುಪಡಿಸ್ತಾರೆ. ಐವತ್ತು ಸಾವಿರಕ್ಕೆ ಕಡಿಮೆಯಿಲ್ಲದಂತೆ ದಂಡ ಹಾಗೂ ಐದು ವರ್ಷದವರೆಗೂ ಶಿಕ್ಷೆ ವಿಧಿಸಲಾಗುತ್ತದೆ.

The post ಡಿಯರ್ ವಾಹನ ಸವಾರರೇ: ಹಟಕ್ಕೆ ಬಿದ್ದು ನಿಮ್ಮ ವೆಹಿಕಲ್ ರಸ್ತೆಗಿಳಿಸಿದ್ರೆ ಹೀಗೆಲ್ಲಾ ಆಗುತ್ತೆ.. appeared first on News First Kannada.

Source: newsfirstlive.com

Source link