ಬಿಗ್‍ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್‌ನಿಂದ ಜೋಡಿಗಳಾಗಿ ಅಭಿಮಾನಿಗಳ ಮನ ಕದ್ದಿರುವ ಅರವಿಂದ್ ಮತ್ತು ದಿವ್ಯಾ ಉರುಡುಗ ಈಗ ಡ್ಯುಯೆಟ್ ಡ್ಯಾನ್ಸ್ ಮಾಡಿ ಮನೆ ಮಂದಿಯನ್ನು ರಂಜಿಸಿದ್ದಾರೆ.

ಬಿಗ್‍ಬಾಸ್ ಕಳೆದ  ಇನ್ನಿಂಗ್ಸ್‌ನಲ್ಲಿ ಮನೆಯಲ್ಲಿದ್ದ ಕಾಫಿ ಕಪ್ ಹೊಡೆದು ಹಾಕಿದ ಸ್ಪರ್ಧಿಗಳಿಗೆ ಬಿಗ್‍ಬಾಸ್ ಚಿಕ್ಕ ಕಪ್‍ವೊಂದನ್ನು ಕಳುಹಿಸಿ ತಮ್ಮ ಮುಂದಿನ ಆದೇಶದವರೆಗೂ ಅದೇ ಕಪ್‍ನಲ್ಲಿ ಕಾಫಿ ಹಾಗೂ ನೀರು ಕುಡಿಯಲು ಆದೇಶಿಸುತ್ತಿದ್ದರು.

 

ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮನೆಯ ಬಾಲ್ ಒಡೆದು ಹಾಕಿದ್ದ ದಿವ್ಯಾ ಉರುಡುಗಗೆ ಬಿಗ್‍ಬಾಸ್ ವಿಭಿನ್ನವಾದ ಶಿಕ್ಷೆ ನೀಡಿದ್ದಾರೆ. ಹೌದು, ಕಿಚನ್‍ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಿವ್ಯಾ ಉರುಡುಗ ಬೌಲ್ ಒಡೆದು ಹಾಕಿದ್ದರು. ನಂತರ ಕೈ ಜಾರಿ ಮಿಸ್ ಆಗಿ ಬಾವ್ಲ್ ಕೆಳಗೆ ಬಿದ್ದು ಒಡೆದು ಹೋಯಿತು, ಕ್ಷಮಿಸಿ ಪ್ಲೀಸ್ ಯಾವುದೇ ಶಿಕ್ಷೆ ನೀಡಬೇಡಿ ಎಂದು ಮನವಿ ಮಾಡಿದ್ದರು.

ಮನೆಯ ಪ್ರಾಪರ್ಟಿ ಹೊಡೆದು ಹಾಕಿದ್ದರಿಂದ ದಿವ್ಯಾ ಉರುಡುಗಗೆ ಶಿಕ್ಷೆಯಾಗಿ ಬಿಗ್‍ಬಾಸ್ ರಾತ್ರಿ ನೀವು ಅರವಿಂದ್ ಜೊತೆ ಒಂದು ಹಾಡಿಗೆ ನೃತ್ಯ ಮಾಡಬೇಕು ಎಂದು ಸೂಚಿಸಿದ್ದರು. ಈ ವೇಳೆ ದಿವ್ಯಾ ಉರುಡುಗ ಅರವಿಂದ್ ಡ್ಯಾನ್ಸ್ ಮಾಡುತ್ತೀರಾ ತಾನೇ ಎಂದು ಕೇಳತ್ತಾರೆ. ಆಗ ಅರವಿಂದ್ ಇದೊಂದು ಬಾಕಿ ಇತ್ತು ಎನ್ನುತ್ತಾ ನಕ್ಕು ಸಮ್ಮತಿ ಸೂಚಿಸಿದ್ದರು.

ನಂತರ ಅದರಂತೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ, ಅರವಿಂದ್ ಹಾಗೂ ದಿವ್ಯಾ ಉರುಡುಗ ಸೀತಾ ರಾಮ ಕಲ್ಯಾಣ ಸಿನಿಮಾದ, ಅರೆ.. ಅರೆ.. ಮುದ್ದು ಗಿಣಿ.. ಹಾಡಿಗೆ ನೃತ್ಯ ಮಾಡಿದ್ದಾರೆ. ಹಾಡಿನ ಕೊನೆಯಲ್ಲಿ ಅರವಿಂದ್ ದಿವ್ಯಾ ಉರುಡುಗರನ್ನು ಎತ್ತಿಕೊಳ್ಳುತ್ತಾರೆ ಈ ವೇಳೆ ಮನೆಮಂದಿಯೆಲ್ಲಾ ಜೋರಾಗಿ ಕಿರುಚುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.

ಹಾಡು ಮುಕ್ತಾಯಗೊಂಡ ನಂತರ ಎಲ್ಲರೂ ಊಟ ಮಾಡಿಕೊಂಡು ತಾಂಬುಲಾ ತೆಗೆದುಕೊಂಡು ಹೋಗಿ ಎಂದು ಸ್ಪರ್ಧಿಗಳು ಅರವಿಂದ್, ದಿವ್ಯಾ ಉರುಡುಗ ಕಾಲೆಳೆದಿದ್ದಾರೆ. ಇದನ್ನೂ ಓದಿ: ನನಗೆ ಮನೆಯಿಂದ ಪ್ರೆಷರ್ ಹಾಕ್ತಿದ್ದಾರೆ : ವೈಷ್ಣವಿ ಬಳಿ ಸತ್ಯ ಬಾಯ್ಬಿಟ್ಟ ಶುಭಾ ಪೂಂಜಾ

The post ಡಿಯುಗೆ ಅರೆ..ಅರೆ.. ಮುದ್ದು ಗಿಳಿ ಎಂದ ಅರವಿಂದ್ appeared first on Public TV.

Source: publictv.in

Source link