ಡಿಯೋಡರೆಂಟ್ ಬಳಕೆ ಕ್ಯಾನ್ಸರ್​ಗೆ ಕಾರಣವಾಗುತ್ತದೆಯೇ? ಇಲ್ಲಿದೆ ಮಾಹಿತಿ ಪರಿಶೀಲಿಸಿ | Deodorants cause breast cancer know the real fact


ಡಿಯೋಡರೆಂಟ್ ಬಳಕೆ ಕ್ಯಾನ್ಸರ್​ಗೆ ಕಾರಣವಾಗುತ್ತದೆಯೇ? ಇಲ್ಲಿದೆ ಮಾಹಿತಿ ಪರಿಶೀಲಿಸಿ

ಸಾಂದರ್ಭಿಕ ಚಿತ್ರ

ಮನೆಯಿಂದ ಹೊರ ಹೋಗುವ ಮುನ್ನ ಸುಗಂಧ ದ್ರವ್ಯವನ್ನು ಮೈಗೆ ಸಿಂಪಡಿಸಿಕೊಳ್ಳುವ ಅಥವಾ ಡಿಯೋಡರೆಂಟ್ (Deodorants) ಬಳಸುವ ಅಭ್ಯಾಸ ಇತ್ತೀಚೆಗೆ ಎಲ್ಲರಲ್ಲೂ ರೂಡಿಯಾಗಿದೆ. ದೇಹದ ದುರ್ವಾಸನೆಯನ್ನು ತಪ್ಪಿಸಲು ಅನೇಕ ಸುಗಂಧ ದ್ರವ್ಯಗಳನ್ನು ಹೊಂದಿರುವ ಅತ್ಯಂತ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ನೀವು ಬಳಸುತ್ತಿರುವ ಡಿಯೋಡರೆಂಟ್ ಅಥವಾ ಆಂಟಿಪೆರ್ಸ್ಪಿರಂಟ್ (Antiperspirant) ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೌದು, ಕೆಲವು ಅಧ್ಯಯನಗಳು ಡಿಯೋಡರೆಂಟ್ ಅಥವಾ ಆಂಟಿಪೆರ್ಸ್ಪಿರಂಟ್​ನ ಅತಿಯಾದ ಬಳಕೆಯು ಸ್ತನ ಕ್ಯಾನ್ಸರ್​ನ (Breast cancer) ಅಪಾಯದೊಂದಿಗೆ ಸಂಬಂಧಿಸಿದೆ ಎಂದು ಬಹಿರಂಗಪಡಿಸಿದೆ.

ಡಿಯೋಡರೆಂಟ್​ಗಳು ಅಥವಾ ಆಂಟಿಪೆರ್ಸ್ಪಿರಂಟ್​ಗಳು ಸ್ತನ ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ವರದಿಗಳು ಹೇಳಿವೆ. ಮಾಧ್ಯಮ ವರದಿಗಳ ಪ್ರಕಾರ, ಸ್ತನವು ಅಂಡರ್ ಆರ್ಮ್‌ನ ಹತ್ತಿರದ ಭಾಗವಾಗಿದೆ. ಇದರಿಂದಾಗಿ ಈ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಪ್ರಶ್ನೆಯೆಂದರೆ, ಡಿಯೋಡರೆಂಟ್‌ಗಳು ಅಥವಾ ಆಂಟಿಪೆರ್ಸ್ಪಿರಂಟ್‌ಗಳ ಬಳಕೆಯು ನಿಜವಾಗಿಯೂ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆಯೇ? ಎಂಬುವುದು ಅದಕ್ಕೆ ಉತ್ತರ ಇಲ್ಲಿದೆ.

ಡಿಯೋಡರೆಂಟ್ ಮತ್ತು ಸ್ತನ ಕ್ಯಾನ್ಸರ್ ನಡುವೆ ಸಂಬಂಧವಿದೆಯೇ?

ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಮತ್ತು ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಪ್ರಕಾರ, ಡಿಯೋಡರೆಂಟ್‌ಗಳು ಮತ್ತು ಆಂಟಿಪೆರ್ಸ್ಪಿರಂಟ್‌ಗಳನ್ನು ಸ್ತನ ಕ್ಯಾನ್ಸರ್ ಅಪಾಯಕ್ಕೆ ಜೋಡಿಸಲು ಬಲವಾದ ಫಲಿತಾಂಶಗಳಿಲ್ಲ. ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ 2002 ರ ವರದಿಯ ಪ್ರಕಾರ, ಸ್ತನ ಕ್ಯಾನ್ಸರ್ ಹೊಂದಿರುವ 813 ಮಹಿಳೆಯರನ್ನು ಸ್ತನ ಕ್ಯಾನ್ಸರ್ ಇಲ್ಲದ 993 ಮಹಿಳೆಯರೊಂದಿಗೆ ಹೋಲಿಸಲಾಗಿದೆ.

ಈ ವರದಿಯು ಆಂಟಿಪೆರ್ಸ್ಪಿರಂಟ್​ಗಳು, ಡಿಯೋಡರೆಂಟ್​ಗಳು ಅಥವಾ ಅಂಡರ್ ಆರ್ಮ್ ಶೇವಿಂಗ್ ಮತ್ತು ಸ್ತನ ಕ್ಯಾನ್ಸರ್ ನಡುವೆ ಯಾವುದೇ ಸಂಬಂಧವನ್ನು ಕಂಡುಕೊಂಡಿಲ್ಲ. ಆದರೆ 2003 ಮತ್ತು 2009 ರ ಸಂಶೋಧನೆಯು ಇವುಗಳ ನಡುವೆ ಪರಸ್ಪರ ಸಂಬಂಧ ಸಾಧ್ಯ ಎಂದು ಹೇಳಿದೆ. ಆದಾಗ್ಯೂ, ಇದಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳು ಕಂಡುಬಂದಿಲ್ಲ.

ಡಿಯೋಡರೆಂಟ್‌ಗಳು ಮತ್ತು ಆಂಟಿಪೆರ್ಸ್ಪಿರಂಟ್‌ಗಳಿಗೆ ಪರ್ಯಾಯಗಳಿವೆಯೇ?

ಪ್ರತಿಯೊಬ್ಬ ವ್ಯಕ್ತಿಯ ದೇಹವು ವಿಭಿನ್ನವಾಗಿರುತ್ತದೆ. ಒಬ್ಬ ವ್ಯಕ್ತಿಗೆ ಸೂಕ್ತವಾದ ವಿಷಯವು ಇನ್ನೊಬ್ಬರಿಗೆ ಅದೇ ರೀತಿಯಲ್ಲಿ ಕೆಲಸ ಮಾಡುವುದು ಅನಿವಾರ್ಯವಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾವು ನಮ್ಮದೇ ಆದ ಕೆಲವು ನೈಸರ್ಗಿಕ ಮತ್ತು ಡಿಯೋಡರೆಂಟ್ ಆಯ್ಕೆಗಳನ್ನು ಅಳವಡಿಸಿಕೊಳ್ಳಬಹುದು. ಉದಾಹರಣೆಗೆ ಅಡಿಗೆ ಸೋಡಾ ಡಿಯೋಡರೆಂಟ್.

TV9 Kannada


Leave a Reply

Your email address will not be published. Required fields are marked *