ಟಾಲಿವುಡ್ ಅಕ್ಕಿನೇನಿ ನಾಗಚೈತನ್ಯ ಜೊತೆ ಡಿವೋರ್ಸ್ ಆದ ನಂತರ ಸಿನಿಮಾ ರಂಗದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ ಸಮಂತ ರುತ್ ಪ್ರಭು. ಸದ್ಯ ತೆಲುಗಿನಲ್ಲಿ ಕಾಣಿಸಿಕೊಳ್ಳುತ್ತಿರುವ ಏಕೈಕ ಸಿನಿಮಾ ಅಂದ್ರೆ ಗುಣಶೇಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ”ಶಾಕುಂತಲಾ” ಸಿನಿಮಾ. ಈ ಸಿನಿಮಾದ ಶೂಟಿಂಗ್ ಸಂಪೂರ್ಣ ಕಂಪ್ಲೀಟ್ ಆಗಿದ್ದು, ಡಬ್ಬಿಂಗ್ ಕೆಲಸ ಶುರುವಾಗಿದೆ.
ಸಾಮಾನ್ಯವಾಗಿ ಇದೇನು ಅಂತ ವಿಶೇಷ ಅಲ್ಲ ಬಿಡಿ. ಆದರೆ ಸಮಂತ ಡಬ್ಬಿಂಗ್ಗಾಗಿ ಎಲ್ಲಿಗೆ ಭೇಟಿ ನೀಡಿದ್ದಾರೆ ಅನ್ನೋದೆ ವಿಶೇಷ. ಹೌದು ಸಮಂತ ‘ಶಾಕುಂತಲಾ’ ಸಿನಿಮಾಗಾಗಿ ಹೈದರಾಬಾದ್ನಲ್ಲಿರೋ ಅನ್ನ ಪೂರ್ಣ ಸ್ಟುಡಿಯೋ ಗೆ ಭೇಟಿ ನೀಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಅನ್ನಪೂರ್ಣ ಸ್ಟುಡಿಯೋ ಅಕ್ಕಿನೇನಿ ಕುಟುಂಬಕ್ಕೆ ಸೇರಿದ್ದು.
ಡಿವೋರ್ಸ್ ಆದ ನಂತರ ಸಮಂತ ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡಿರುವುದ ಕೆಲವರಿಗೆ ಆಶ್ಚರ್ಯವಾಗಿದ್ದರೆ, ಕೆಲವರು ಸಮಂತ ಅವರ ಕಮೀಟ್ಮೆಂಟ್ ನೋಡಿ ಸಹಬ್ಬಾಸ್ ಅಂದಿದ್ದಾರೆ. ಅಂದ ಹಾಗೆ 2021 ಅಕ್ಟೋಬರ್ 2 ನೇ ತಾರೀಖು ಸಮಂತ ಮತ್ತು ನಾಗಚೈತನ್ಯ ಡಿವೋರ್ಸ್ ಪಡೆಯವುದರ ಮೂಲಕ, 4 ವರ್ಷದ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.
ಇದನ್ನೂ ಓದಿ: ಪರಿಷತ್ ಚುನಾವಣೆ: ಕಾಂಗ್ರೆಸ್ ಶಾಸಕರಿಗೆ ಹೊಸ ಟಾಸ್ಕ್ ಕೊಟ್ಟ ಡಿ.ಕೆ ಶಿವಕುಮಾರ್