ಡಿವೋರ್ಸ್​ ಬೆನ್ನಲ್ಲೇ ಹಳೇ ವಿಡಿಯೋ ವೈರಲ್​.. ಧನುಷ್​​ ಬಗ್ಗೆ ರಜನಿಕಾಂತ್​​ ಹೇಳಿದ್ದೇನು ಗೊತ್ತಾ?


ಸೂಪರ್​ಸ್ಟಾರ್ ರಜನಿಕಾಂತ್​ ಪುತ್ರಿ ಐಶ್ವರ್ಯಾ ಹಾಗೂ ತಮಿಳು ನಟ ಧನುಷ್​ ಅವರು ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಆದರೆ ಐಶ್ವರ್ಯಾ ಹಾಗೂ ಧನುಷ್​ ಬೇರೆ ಬೇರೆಯಾಗಲು ನಿರ್ಧರಿಸಿದ್ದು ಯಾಕೆ? ಇಬ್ಬರ ಮಧ್ಯೆ ಬಿರುಕು ಮೂಡಿದ್ದು ಹೇಗೆ ಎಂಬುದುದ ಬಗ್ಗೆ ಮಾಹಿತಿ ಇನ್ನೂ ತಿಳಿದಿಲ್ಲ.

ಇನ್ನು ಐಶ್ವರ್ಯಾ ಹಾಗೂ ಧನುಷ್​ ಡಿವೋರ್ಸ್​ ಸುದ್ದಿ ಅವರ ಅಭಿಮಾನಿಗಳಿಗೆ ಭಾರಿ ಆಘಾತವನ್ನುಂಟು ಮಾಡಿದೆ. ಸೋಶಿಯಲ್​ ಮೀಡಿಯಾ ಮೂಲಕ ಧನುಷ್ ಹಾಗೂ ಐಶ್ವರ್ಯಾ ತಮ್ಮ ಡಿವೋರ್ಸ್​ ವಿಚಾರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಡಿವೋರ್ಸ್​ ಸುದ್ದಿ ಹೊರಬೀಳುತಿದಂತೆ ಧನುಷ್​ ಹಾಗೂ ಐಶ್ವರ್ಯಾ ಅವರ ಕೆಲವು ಹಳೆ ಫೋಟೋಸ್ ವಿಡಿಯೋಗಳು

ಸೋಶಿಯಲ್​ ಮೀಡಿಯಾಲ್ಲಿ ಸಖತ್ ವೈರಲ್​ ಆಗಿವೆ. ಹಾಗೆಯೇ 2018ರಲ್ಲಿ ನಡೆದ ಕಾಲ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ವೇಳೆ ರಜನಿಕಾಂತ್​, ಧನುಷ್​ ಬಗ್ಗೆ ಮಾತಾನಾಡಿದ ವಿಡಿಯೋ ಈಗ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ರಜನಿ, ಧನುಷ್​ ಅವರನ್ನು ಚಿನ್ನದಂತ ಹುಡುಗ ಅಂತ ಕರೆದಿದ್ದಾರೆ. ಧನುಷ್​ ತನ್ನ ಪ್ರೊಡಕ್ಷನ್ ಹೌಸ್ ನಡೆಸುತ್ತಿರೋ ರೀತಿ ನೋಡಿ ನಾನು ಹೆಮ್ಮೆ ಪಡುತ್ತೇನೆ. ಧನುಷ್​ ಕೇವಲ ಪ್ರತಿಭಾವಂತ ನಟ ಮಾತ್ರ, ಗೋಲ್ಡನ್​​ ಬಾಯ್​​ ಕೂಡ. ಧನುಷ್​ ನನ್ನ ಅಳಿಯ ಎಂಬ ಕಾರಣಕ್ಕೆ ನಾನು ಈ ಮಾತನ್ನು ಹೇಳುತ್ತಿಲ್ಲ .ಅವನ್ನು ನಿಜವಾಗಿಯೂ ಚಿನ್ನದಂತ ಹುಡುಗ, ಯಾಕೆಂದರೆ ಅವನು ತನ್ನ ಹೆತ್ತವರನ್ನು ಆರಾಧಿಸುತ್ತಾನೆ. ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅವನ್ನು ಒಳ್ಳೆಯ ತಂದೆ ಮತ್ತು ಬಹಳ ಒಳ್ಳೆ ಅಳಿಯ ಅಂತ ರಜನಿಕಾಂತ್​ ಹೇಳಿದ್ದರು.

News First Live Kannada


Leave a Reply

Your email address will not be published. Required fields are marked *