ಡಿವೋರ್ಸ್ ಪಡೆದ ಮೇಲೆ ಯಾರೂ ಮತ್ತೆ ಒಂದಾಗಲ್ಲ; ನಾವೂ ಹಾಗೆ -ಬಿ.ಸಿ.ಪಾಟೀಲ್ ಹೀಗ್ಯಾಕೆ ಅಂದ್ರು..?


ಕೊಪ್ಪಳ: ನಾವು ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಡಿವೋರ್ಸ್ ಕೊಟ್ಟಿದ್ದೇವೆ. ಡಿವೋರ್ಸ್ ಕೊಟ್ಟವರು, ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್​ಗೆ​ ಹೋಗಲ್ಲ ಅಂತ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವ್ರು, ಬಿಜೆಪಿ ಮನೆಗೆ ಸೊಸೆಯಾಗಿ ಬಂದಿದ್ದೇವೆ. ಇಲ್ಲಿಯ ಮಕ್ಕಳಾಗಿಯೇ ಇರುತ್ತೇವೆ. ನಾವು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಡಿವೋರ್ಸ್ ಕೊಟ್ಟಿದ್ದೇವೆ. ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ನಾವು ಹೋಗೋದಿಲ್ಲ. ಇಲ್ಲಿಯ ಮಕ್ಕಳಾಗಿಯೇ ಇರುತ್ತೇವೆ ಎಂದರು.

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿಲ್ಲ. ಯಡಿಯೂರಪ್ಪನವರೇ ರಾಜೀನಾಮೆ ಕೊಟ್ಟಿದ್ದಾರೆ. ಹಾದಿ ಬೀದಿಲಿ ಯಾರೂ ಮಾತನಾಡಬಾರದು. ನಾನು ಕೃಷಿ ಸಚಿವನಾಗಿ ಕೃಷಿ ಉತ್ತೇಜನಕ್ಕಾಗಿ ಫೋಟೋ ತಗೆಸಿಕೊಂಡಿದ್ದೇನೆ. ಅದು ನಾಟಕೀಯ ಅಲ್ಲ, ಅದು ವಾಸ್ತವ. ನಾನೇನು ಕಿಕ್ ಬ್ಯಾಕ್ ಪಡೆದಿಲ್ಲ. ಕಾಂಗ್ರೆಸ್​ಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

News First Live Kannada


Leave a Reply

Your email address will not be published.