ಒಂದಲ್ಲ ಎರಡಲ್ಲ ರೀ.. ಬರೋಬ್ಬರಿ 27 ವರ್ಷಗಳ ನಂತರ ವಿಶ್ವದ ಅತೀ ಶ್ರೀಮಂತ ಬಿಲ್​ಗೇಟ್ಸ್​ ಹಾಗೂ ಅವರ ಪತ್ನಿ ಮಿಲಿಂಡಾ ನಿನ್ನೆ ತಮ್ಮ ದಾಂಪತ್ಯ ಜೀವನವನ್ನ ಅಂತ್ಯಗೊಳಿಸಿದ್ದಾರೆ. ಅಲ್ಲದೇ, ವಿಚ್ಛೇದನದ ನಂತರವೂ ಇಬ್ಬರೂ ತಮ್ಮ ಸಂಸ್ಥೆಗೋಸ್ಕರ ಕೆಲಸ ಮಾಡೋದಾಗಿ ಹೇಳಿದ್ದಾರೆ. ಆದ್ರೆ, ಇವರಿಬ್ಬರ ವಿಚ್ಚೇದನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಮಾತುಗಳು ಕೇಳಿ ಬರ್ತಿದೆ.

ಇಮ್ರಾನ್​​ ಅಣ್ಣ, ನೀನಾದ್ರೂ ಮಿಲಿಂದಾರನ್ನ ಪಟಾಯ್ಸು! 
ಅದೇನೋ ಹೇಳ್ತಾರಲ್ವಾ..? ಕಂಡೋರ್​ ಮನೆ ವಿಚಾರ ಅಂದ್ರೆ ನಮ್ಗೇನಾಗ್ಬೇಕು ಬಾಯಿಗೆ ಬಂದಹಾಗೆ ಮಾತಾಡಿದ್ರೆ ಸಾಕು ಅಂತ. ಹಾಗೆ ಈ ಪಾಕಿಸ್ತಾನದವ್ರು. ಅಲ್ಲಿನ ಕೆಲವರು ಒಂದು ಐಡಿಯಾವನ್ನ ತನ್ನ ಪ್ರಧಾನಮಂತ್ರಿಗೆ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದ ಹಲವು ಬಳಕೆದಾರರು​, ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್​ ಖಾನ್​ಗೆ, ಮಾಡಿರೋ ಸಾಲವನ್ನ ಹೇಗೆ ಹಿಂದಿರುಗಿಸಬಹುದು ಅನ್ನೋದರ ಬಗ್ಗೆ ಒಂದು ಸಂದೇಶವನ್ನ ರವಾನಿಸಿದ್ದಾರೆ.  “ನಿಮ್ಮ ಹತ್ತಿರ ನಾನು ನಿಜವನ್ನೇ ಹೇಳ್ತಾಯಿದ್ದೀನಿ ಕೇಳಿ, ಆ ಜೀವನಾಂಶ.. ಪಾಕಿಸ್ತಾನದ  ಬಜೆಟ್​ಗಿಂದ ದೊಡ್ಡದು. ನಮ್ಮ ಕೊನೆಯ ಭರವಸೆ, ನಮ್ಮ ಪ್ರಧಾನಮಂತ್ರಿ ಇಮ್ರಾನ್ ಖಾನ್​ ಮಿಲಿಂಡ ಗೇಟ್ಸ್​ರನ್ನ ಪಟಾಯಿಸಿ, ಆ ದುಡ್ಡಿರೋ ಬ್ಯಾಗ್​ನ್ನ ಪಾಕಿಸ್ತಾನಕ್ಕೆ ತಂದ್​ ಬಿಡಿ ನಮ್ಮ ರಾಜ ಪ್ಲೀಸ್​. ಪಾಕಿಸ್ತಾನದವ್ರು ಇಂಟರ್​ನ್ಯಾಷನಲ್​ ಮನಿಟರಿ ಫಂಡ್​ನಿಂದ ಸಾಲ ತಂದಿರೋ ದುಡ್ಡನ್ನ ವಾಪಸ್ ಕೊಡೋದಕ್ಕೆ ಆಗಲ್ಲ, ಹೀಗಾದ್ರೂ ದುಡ್ಡನ್ನ ವಾಪಸ್​ ಮಾಡೋಣ” ಅಂತ ವ್ಯಕ್ತಿಯೊಬ್ಬ ಬರೆದುಕೊಂಡಿದ್ದಾನೆ.

​ಈ ಟ್ವೀಟ್​ಗಳು ಒಂದು ರೀತಿಯಲ್ಲಿ ವ್ಯಂಗ್ಯವಾಗಿ, ಕಾಲು ಎಳೆಯೋ ರೀತಿಯಲ್ಲಿ ಇದ್ದು ಸಖತ್ ಫನ್ನಿಯಾಗಿವೆ. ಇದ್ರ ಬೆನ್ನಲ್ಲೇ ಅಪ್ಪಿ ತಪ್ಪಿ ಮೂರು ಪತ್ನಿಯರ ಸರದಾರ ಇಮ್ರಾನ್ ಖಾನ್, ಇದು ನಿಜ ಅಂತಾ ಭಾವಿಸಿ ಬಿಟ್ರೆ ಮಾತ್ರ ಕಷ್ಟ.. ಅಲ್ವಾ?

The post ಡಿವೋರ್ಸ್ ಬೆನ್ನಲ್ಲೇ, ಹೆಂಗಾದ್ರೂ ಮಿಲಿಂಡಾ ಗೇಟ್ಸ್​​ನ ಪಟಾಯ್ಸಿ ಅಣ್ಣ ಅಂತ ಇಮ್ರಾನ್​ಗೆ ದುಂಬಾಲು appeared first on News First Kannada.

Source: newsfirstlive.com

Source link