ಡಿಸೆಂಬರ್​ಗೆ ವರ್ಕ್ ಫ್ರಮ್ ಹೋಮ್ ಕೊನೆ? ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆತರಲು ಐಟಿ ಕಂಪೆನಿಗಳ ಯೋಜನೆ | IT Companies Employees Work From Home To End By This Year End Planning To Bring Back Employees To Desk


ಡಿಸೆಂಬರ್​ಗೆ ವರ್ಕ್ ಫ್ರಮ್ ಹೋಮ್ ಕೊನೆ? ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆತರಲು ಐಟಿ ಕಂಪೆನಿಗಳ ಯೋಜನೆ

ಸಾಂದರ್ಭಿಕ ಚಿತ್ರ

ಕೊವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮವು ಜನಸಾಮಾನ್ಯರ ಮೇಲೆ ಕಡಿಮೆ ಆಗುತ್ತಾ ಬಂದಂತೆ ಕಾಣುತ್ತಾ ತಿಂಗಳ ನಂತರ ಭಾರತದ ಉಳಿದ ಭಾಗಗಳೊಂದಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ತೆರೆದುಕೊಳ್ಳುತ್ತಿದೆ. ಲಸಿಕೆ ಹಾಕುವ ಕಾರ್ಯಕ್ರಮವು ಪ್ರಗತಿಯಲ್ಲಿ ಇರುವಂತೆ, ದೇಶದ ಶೇಕಡಾ 50ರಷ್ಟು ಉದ್ಯೋಗಿಗಳು 2022ರ ಜನವರಿಯಿಂದ ಕಚೇರಿಗಳಿಗೆ ಮರಳುವ ನಿರೀಕ್ಷೆ ಇದೆ. ತಿಂಗಳಾನುಗಟ್ಟಲೆಯಿಂದ ಮನೆಯಿಂದ ಕೆಲಸ ಮಾಡುತ್ತಾ ಬರುತ್ತಿದ್ದುದನ್ನು ಇದು ಮುರಿಯುತ್ತದೆ. ಆದರೂ ಕಂಪೆನಿಗಳು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ, ವಾರಕ್ಕೆ ಐದು ದಿನಗಳ ಬದಲಿಗೆ ವಾರಕ್ಕೆ ಮೂರು ದಿನವಾದರೂ ಉದ್ಯೋಗಿಗಳನ್ನು ಕಚೇರಿಗೆ ಮರಳಿ ಕರೆತರಲು ಹೆಚ್ಚು ಉತ್ಸುಕರಾಗಿದ್ದಾರೆ ಎಂದು ನಾಸ್​ಕಾಮ್ ವರದಿ ತಿಳಿಸಿದೆ. ವರದಿಯ ಪ್ರಕಾರ, 25 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳು ನವೆಂಬರ್‌ನೊಳಗೆ ತಮ್ಮ ಕಚೇರಿಗಳಿಗೆ ಹಿಂತಿರುಗುತ್ತಾರೆ. ಆದರೆ ವಯಸ್ಸಿನ ಆಧಾರದ ಮೇಲೆ ಮುಂದಿನ ಲಾಟ್ ಇದೇ ರೀತಿ ಶ್ರೇಣಿಯಲ್ಲಿ ಬರುತ್ತದೆ.

ಮಾಹಿತಿ ತಂತ್ರಜ್ಞಾನ ವಲಯದ ಉನ್ನತ ಸಂಸ್ಥೆಯಾದ ನಾಸ್​ಕಾಮ್ ವರದಿ ಪ್ರಕಾರ, 40 ವರ್ಷ ವಯಸ್ಸಿನೊಳಗಿನ ಜನರು ತಮ್ಮ ಹಿಂದಿನ ಗುಂಪಿನ ನಂತರ ಹಿಂತಿರುಗುತ್ತಾರೆ. ಮತ್ತು ಮುಂಬರುವ ತಿಂಗಳುಗಳಲ್ಲಿ ವಯಸ್ಸಾದ ಉದ್ಯೋಗಿಗಳು ಅನುಸರಿಸುತ್ತಾರೆ. “ಉದ್ಯಮವು ಈಗ ಕ್ರಮೇಣ ಪುನಃ ತೆರೆಯಲು ಸಿದ್ಧವಾಗಿದೆ ಮತ್ತು ಹೈಬ್ರಿಡ್ ಆಪರೇಟಿಂಗ್ ಮಾದರಿಯನ್ನು ಪರಿಪೂರ್ಣಗೊಳಿಸಲು ನೋಡುತ್ತಿದೆ. ಇದು ಆನ್‌ಸೈಟ್ ಮತ್ತು ರಿಮೋಟ್ ಆಪರೇಟಿಂಗ್ ಮಾಡೆಲ್‌ಗಳೆರಡನ್ನೂ ಅತ್ಯುತ್ತಮವಾಗಿ ತರುತ್ತದೆ,” ಎಂದು ನಾಸ್​ಕಾಮ್‌ನ ಅಧ್ಯಕ್ಷ ದೇಬ್​ಜನಿ ಘೋಷ್ ಹೇಳಿದ್ದಾರೆ.

ಶೇ 70ರಷ್ಟು ಕೆಲಸದ ಸ್ಥಳಗಳು ಹೈಬ್ರಿಡ್ ಮಾದರಿಯ ಕೆಲಸ
ನವೆಂಬರ್ 1, 2021ರಂದು ಪ್ರಕಟವಾದ ‘ನಾಸ್​ಕಾಮ್ ರಿಟರ್ನ್ ಟು ವರ್ಕ್‌ಪ್ಲೇಸ್ ಸಮೀಕ್ಷೆ’ ಪ್ರಕಾರ, ಭಾರತದಲ್ಲಿನ ಸುಮಾರು ಶೇ 70ರಷ್ಟು ಕೆಲಸದ ಸ್ಥಳಗಳು ಹೈಬ್ರಿಡ್ ಮಾದರಿಯ ಕೆಲಸವನ್ನು ಅನ್ವೇಷಿಸುತ್ತಿವೆ. ಆ ಮೂಲಕ ಉದ್ಯೋಗಿಗಳು ಕೆಲವು ದಿನಗಳಲ್ಲಿ ಮನೆಯಿಂದ ಮತ್ತು ಇತರ ದಿನಗಳಲ್ಲಿ ಕಚೇರಿಯಿಂದ ಕೆಲಸ ಮಾಡಬಹುದು. ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಈ ಮಾದರಿಯನ್ನು ಅಳವಡಿಸಿಕೊಳ್ಳುವ ಮೊದಲಿಗ ಸ್ಥಾನದಲ್ಲಿ ಇರುತ್ತವೆ ಎಂದು ನಿರೀಕ್ಷಿಸಲಾಗಿದೆ. 1,000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಹೈಬ್ರಿಡ್ ಆಪರೇಟಿಂಗ್ ಮಾದರಿಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ಹೇಳುತ್ತದೆ. “ಉತ್ತಮ ಮೂಲಸೌಕರ್ಯ ಮತ್ತು ಹಾರ್ಡ್‌ವೇರ್, ಸಾಮಾಜಿಕ ಸಂಪರ್ಕ ಮತ್ತು ಗೆಳೆಯರೊಂದಿಗೆ ಬಾಂಧವ್ಯ, ಹಾಗೂ WFH (ವರ್ಕ್​ ಫ್ರಮ್​ ಹೋಮ್)ಗೆ ಹೋಲಿಸಿದರೆ ಕಡಿಮೆ ಗೊಂದಲಗಳು ಕೆಲಸದ ಸ್ಥಳಕ್ಕೆ ಮರಳಲು ಉದ್ಯೋಗಿ ಆದ್ಯತೆಗೆ ಪ್ರಮುಖ ಮೂರು ಕಾರಣಗಳಾಗಿವೆ,” ಎಂದು ನಾಸ್​ಕಾಮ್ ವರದಿ ಹೇಳಿದೆ.

ಕೆಲಸಕ್ಕೆ ಮರಳುವುದಕ್ಕೆ ಮೂರು ಕಾರಣಗಳು
“ಕೊವಿಡ್-19ನಿಂದ ಸುರಕ್ಷತೆ, ಹೊಂದಿಕೊಳ್ಳುವ ಕೆಲಸದ ಸಮಯಗಳು ಮತ್ತು ಮೇಲ್ವಿಚಾರಕರೊಂದಿಗೆ ಉತ್ತಮ ಸಹಯೋಗ ಹಾಗೂ ಸಂವಹನವು ದೂರದ ಕೆಲಸವನ್ನು ಆನಂದಿಸಲು ಮೂರು ಪ್ರಮುಖ ಕಾರಣಗಳಾಗಿವೆ ಎಂದು ನೌಕರರು ನಂಬುತ್ತಾರೆ,” ಎಂಬುದಾಗಿ ಅದು ಸೇರಿಸುತ್ತದೆ. ಭಾರತದಲ್ಲಿನ ತಂತ್ರಜ್ಞಾನ ಉದ್ಯಮದಲ್ಲಿನ ಉದ್ಯೋಗಿಗಳು ತಮ್ಮ ಕಚೇರಿಗೆ ಮರಳಿದ ನಂತರ ಹೊಸ ಮಾದರಿಯ ಕೆಲಸದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ವರದಿಯು ಕಂಡುಕೊಂಡಿದೆ. ಮಾಹಿತಿ ತಂತ್ರಜ್ಞಾನದ ಪ್ರಮುಖ ಟಿಸಿಎಸ್ ಈಗಾಗಲೇ ತನ್ನ ಉದ್ಯೋಗಿಗಳನ್ನು ಕಚೇರಿಗೆ ಕರೆಸುವುದಾಗಿ ಹೇಳಿದೆ. ಏಕೆಂದರೆ ಅವರಲ್ಲಿ ಸುಮಾರು ಶೇ 70ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿದ್ದಾರೆ ಮತ್ತು ದೇಶಾದ್ಯಂತ ನಡೆಯುತ್ತಿರುವ ಉದ್ಯೋಗ ನೇಮಕಾತಿಯಲ್ಲಿ ಸುಮಾರು ಶೇ 95ರಷ್ಟು ಜನರು ಕನಿಷ್ಠ ಒಂದು ಡೋಸ್ ಕೊವಿಡ್ -19 ಲಸಿಕೆಯನ್ನು ಪಡೆದಿದ್ದಾರೆ.

“ಶೇ 70ರಷ್ಟು ಟಿಸಿಎಸ್‌ನ ಉದ್ಯೋಗಿಗಳು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದು, ಶೇಕಡಾ 95ಕ್ಕಿಂತ ಹೆಚ್ಚು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ನಮ್ಮ ಉದ್ಯೋಗಿಗಳನ್ನು ಕ್ರಮೇಣವಾಗಿ ಕಚೇರಿಗೆ ಕರೆತರಲು ನಾವು ಯೋಜಿಸಿದ್ದೇವೆ,” ಎಂದು ಕಂಪೆನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಾಡ್ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುವ ತ್ರೈಮಾಸಿಕದ ಗಳಿಕೆಯ ಬಗ್ಗೆ ಅಪ್​ಡೇಟ್ಸ್ ಪ್ರಕಟಿಸುವಾಗ ಹೇಳಿದ್ದಾರೆ.

ಕೆಲಸ-ಜೀವನದ ಸಮತೋಲನ
ಎನ್.ಆರ್. ನಾರಾಯಣ ಮೂರ್ತಿ ಒಡೆತನದ ಐಟಿ ಪ್ರಮುಖ ಇನ್ಫೋಸಿಸ್ ಕಂಪೆನಿಯ ತ್ರೈಮಾಸಿಕ ಗಳಿಕೆ ಪ್ರಕಟಿಸುವಾಗ ಇದೇ ಕ್ರಮವನ್ನು ಅನುಸರಿಸಿತು ಮತ್ತು ಮುಂದೆ ಹೈಬ್ರಿಡ್ ಮಾದರಿಯನ್ನು ಅನುಸರಿಸುವುದಾಗಿ ಹೇಳಿದೆ. “ಭಾರತದಲ್ಲಿ ಶೇಕಡಾ 86ರಷ್ಟು ಇನ್ಫೋಸಿಸ್ ಉದ್ಯೋಗಿಗಳು ಕನಿಷ್ಠ ಒಂದು ಡೋಸ್ ‘ಲಸಿಕೆ’ ಪಡೆದಿರುವುದರಿಂದ ನಾವು ಈಗ ಹೈಬ್ರಿಡ್ ಕೆಲಸದ ಮಾದರಿಯನ್ನು ಅಳವಡಿಸಿಕೊಳ್ಳಲು ತಯಾರಿ ನಡೆಸುತ್ತಿದ್ದೇವೆ. ಉತ್ಪಾದಕತೆ, ಸೈಬರ್ ಸುರಕ್ಷೆ, ಸಂಪರ್ಕದಲ್ಲಿರಲು ಮತ್ತು ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಸಂಪನ್ಮೂಲಗಳೊಂದಿಗೆ ನಾವು ಉದ್ಯೋಗಿಗಳನ್ನು ಸಜ್ಜುಗೊಳಿಸಿದ್ದೇವೆ. ನಮ್ಮ ಪ್ರತಿಭೆಯ ಕಾರ್ಯತಂತ್ರವು ಹೊಸ ಸಮುದಾಯಗಳು ಮತ್ತು ಕೆಲಸದ ಸ್ಥಳಗಳನ್ನು ಒಳಗೊಂಡಿರುವ ವಿಸ್ತರಿತ ನೇಮಕಾತಿಗಳಿಗೆ ಸಹ ಕಾರಣವಾಗಿದೆ,” ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ರಾವ್ ಹೇಳಿದ್ದಾರೆ.

ನಾಸ್​ಕಾಮ್ ವರದಿಯ ಪ್ರಕಾರ, ಶೇ 81ರಷ್ಟು ಉದ್ಯೋಗದಾತರು ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆಯು ಕಚೇರಿಯನ್ನು ಪುನರಾರಂಭಿಸುವ ವಿಷಯದಲ್ಲಿ ಪ್ರಮುಖ ಕಾಳಜಿ ಎಂದು ನಂಬಿದ್ದರೂ ಶೇ 72ಕ್ಕೂ ಹೆಚ್ಚು ಸಂಸ್ಥೆಗಳು 2022ರ ಜನವರಿಯಿಂದ ವಾರಕ್ಕೆ ಮೂರು ದಿನಗಳು ಶೇ 50ರಷ್ಟು ಉದ್ಯೋಗಿಗಳನ್ನು ಮರಳಿ ತರಲು ಯೋಜಿಸಿವೆ.

ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಪದ್ಧತಿಗೆ ಮಾನ್ಯತೆ ನೀಡುವಂತೆ ಮನವಿ ಮಾಡಲಾಗಿದೆ: ಸಚಿವ ಅಶ್ವತ್ಥ್ ನಾರಾಯಣ ಮಾಹಿತಿ

TV9 Kannada


Leave a Reply

Your email address will not be published. Required fields are marked *