ಡಿಸೆಂಬರ್​​​ನಲ್ಲಿ ಚಿತ್ರಪ್ರೇಮಿಗಳಿಗೆ ಸಿನಿ ಹಬ್ಬ.. ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗ್ತಿದೆ ಬಹುನಿರೀಕ್ಷಿತ ಸಿನಿಮಾಗಳು


ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್​ನಲ್ಲಿ ಟಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್​ ಆಗುತ್ತಿದ್ದು ಸಿನಿ ಹಬ್ಬವೇ ಶುರುವಾಗಲಿದೆ.

ಹೌದು, ವರ್ಷದ ಕೊನೆಯ ತಿಂಗಳು ಡಿಸೆಂಬರ್​ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್​ ಆಗೋದು ಸಹಜ. ಅದರಂತೇ ಈ ಬಾರಿ ಸ್ಯಾಂಡಲ್​ವುಡ್​ನಲ್ಲಿ ಡಿಸೆಂಬರ್​ ತಿಂಗಳಲ್ಲಿ ರಿಲೀಸ್​ ಆಗುತ್ತಿರುವ ಸಿನಿಮಾಗಳ ಪಟ್ಟಿ ನೋಡುವುದಾದರೆ.

ರೋರಿಂಗ್​ ಸ್ಟಾರ್​ ಶ್ರೀಮುರಳಿ ಆಭಿನಯದ “ಮದಗಜ” ಸಿನಿಮಾ ಡಿಸೆಂಬರ್​ 3ನೇ ತಾರೀಖು ರಿಲೀಸ್​ ಆಗುತ್ತಿದ್ದು, ನಟ ಶರಣ್​ ಅಭಿನಯದ “ಅವತಾರ ಪುರುಷ” ಸಿನಿಮಾ ಡಿಸೆಂಬರ್​ 10ನೇ ತಾರೀಖು ಪ್ರೇಕ್ಷಕರ ಮುಂದೆ ಬರಲಿದೆ. ಡಾಲಿ ಧನಂಜಯ್​ ಅಭಿನಯದ ” ಬಡವ ರಾಸ್ಕಲ್​” ಸಿನಿಮಾ ಡಿಸೆಂಬರ್​ 24ನೇ ತಾರೀಖು ರಿಲೀಸ್​ ಆಗಲಿದ್ದು, ನಟ ರಕ್ಷಿತ್​ ಶೆಟ್ಟಿ ಅಭಿನಯದ “777 ಚಾರ್ಲಿ” ಸಿನಿಮಾ ಡಿಸೆಂಬರ್​ 31 ನೇ ತಾರೀಖು ರಿಲೀಸ್ ಆಗಲಿದೆ. ಇನ್ನು ಕ್ರೇಜಿ ಸ್ಟಾರ್​ ರವಿಚಂದ್ರನ್​ ಅಭಿನಯದ “ದೃಶ್ಯ-2 ” ಚಿತ್ರ ಕೂಡ ಡಿಸೆಂಬರ್​ಬಲ್ಲಿ ರಿಲೀಸ್​ ಆಗಲಿದ್ದು ಚಿತ್ರದ ರಿಲೀಸ್​ ಡೇಟ್​ ಮಾತ್ರ ಇನ್ನು ಫೈನಲ್​ ಆಗಿಲ್ಲ.

ಇನ್ನು ಟಾಲಿವುಡ್​ನಲ್ಲಿ ಡಿಸೆಂಬರ್ ತಿಂಗಳಲ್ಲಿ ರಿಲೀಸ್​ ಆಗುತ್ತಿರುವ ಸಿನಿಮಾಗಳ ಪಟ್ಟಿ ನೋಡುವುದಾದರೆ. ನಂದಮೂರಿ ಬಾಲಕೃಷ್ಣ ನಟನೆಯ “ಆಖಂಡ” ಸಿನಿಮಾ ಡಿಸೆಂಬರ್​ 2 ನೇ ತಾರೀಖು ರಿಲೀಸ್​ ಆಗಲಿದ್ದು, ನಟ ವರುಣ್​ ತೇಜ್​ ಮತ್ತು ರಿಯಲ್​ ಸ್ಟಾರ್ ಉಪೇಂದ್ರ ಆಭಿನಯದ “ಘನಿ” ಸಿನಿಮಾ ಡಿಸೆಂಬರ್​ 9 ತಾರೀಖು ರಿಲೀಸ್​ ಆಗಲಿದೆ. ಇನ್ನು ನಟ ಅಲ್ಲು ಅರ್ಜುನ್​ ನಟನೆಯ ಬಹುನಿರೀಕ್ಷಿತ ಪ್ಯಾನ್​ ಇಂಡಿಯನ್​ ಮೂವಿ “ಪುಷ್ಪ” ಭಾಗ-1 ಚಿತ್ರ ಡಿಸೆಂಬರ್​ 17 ನೇ ತಾರೀಖು ರಿಲೀಸ್​ ಆಗಲಿದೆ. ನ್ಯಾಚುರಲ್​ ಸ್ಟಾರ್​ ನಾನಿ ನಟನೆಯ “ಶ್ಯಾಮ್ ಸಿಂಘ ರಾಯ್” ಡೆಸೆಂಬರ್​ 24 ನೇ ತಾರೀಖು ರಿಲೀಸ್​ ಆಗುಲಿದೆ.

ಒಟ್ಟಿನಲ್ಲಿ ಡಿಸೆಂಬರ್​ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್​ ಆಗುತ್ತಿದು ಯಾವ ಸಿನಿಮಾಕ್ಕೆ ಗೆಲುವು ಒದಗಿ ಬರುತ್ತದೆ ಎಂದು ಕಾದು ನೋಡಬೇಕು.

News First Live Kannada


Leave a Reply

Your email address will not be published.