ನವದೆಹಲಿ: ಈ ವರ್ಷದ ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ದೇಶದ ಎಲ್ಲರಿಗೂ ವ್ಯಾಕ್ಸಿನ್ ಲಭ್ಯವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ.

ವರ್ಚುವಲ್ ಮಾತುಕತೆ ಮೂಲಕ ರಾಜಸ್ಥಾನದ ಕೋವಿಡ್ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡ ಜೆಪಿ ನಡ್ಡಾ ಈ ವೇಳೆ ವ್ಯಾಕ್ಸಿನ್​ ಲಭ್ಯತೆಯ ಭರವಸೆ ನೀಡಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ದೇಶದ ಎಲ್ಲ ಮುಖ್ಯಮಂತ್ರಿಗಳಿಗೂ ಮಾರ್ಚ್ ತಿಂಗಳಲ್ಲೇ ಕೊರೊನಾ ಎರಡನೇ ಅಲೆಯ ಕುರಿತು ಎಚ್ಚರಿಕೆ ನೀಡಿದ್ದರು ಎಂದಿದ್ದಾರೆ.

ಭಾರತ ಕೆಲವೇ ತಿಂಗಳುಗಳಲ್ಲಿ ಎರಡು ಸ್ವದೇಶಿ ಲಸಿಕೆಗಳನ್ನು ಇದೇ ಮೊದಲ ಬಾರಿಗೆ ಅಭಿವೃದ್ಧಿಪಡಿಸಿದೆ. ಈವರೆಗೆ 18 ಕೋಟಿ ಜನರಿಗೆ ಲಸಿಕೆಯನ್ನು ವಿತರಿಸಲಾಗಿದೆ. ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ದೇಶದ ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ.

The post ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ಸಿಗಲಿದೆ- ಜೆ.ಪಿ. ನಡ್ಡಾ ಭರವಸೆ appeared first on News First Kannada.

Source: newsfirstlive.com

Source link