ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ 7 ವಿಕೆಟ್ ಗೆಲುವು ಪಡೆದುಕೊಂಡಿದೆ. ರಾಜಸ್ಥಾನ ರಾಯಲ್ಸ್​ ತಂಡ ನೀಡಿದ್ದ 171 ರನ್​​ಗಳ ಸವಾಲಿನ ಗುರಿಯನ್ನು 3 ವಿಕೆಟ್​ ಕಳೆದುಕೊಂಡು 9 ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿತು.

ಮುಂಬೈ ಪರ ಡಿ ಕಾಕ್​​ 50 ಎಸೆತಗಳಲ್ಲಿ 70 ರನ್​ ಮಿಂಚಿದರೆ, ಅಂತಿಮ ಹಂತದಲ್ಲಿ 8 ಎಸೆತಗಳಲ್ಲಿ 16 ರನ್​ ಸಿಡಿಸಿದ ಪೊಲಾರ್ಡ್​​ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಉಳಿದಂತೆ ಕೃನಾಲ್ ಪಾಂಡ್ಯ 26 ಎಸೆತಗಳಲ್ಲಿ 39 ರನ್​, ಸೂರ್ಯ ಕುಮಾರ್ ಯಾದವ್ 16 ರನ್, ನಾಯಕ ರೋಹಿತ್ ಶರ್ಮಾ 14 ರನ್ ಗಳಿಸಿದರು.

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ನಡೆಸಿದ ರಾಜಸ್ಥಾನ ರಾಯಲ್ಸ್​ ತಂಡ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 171 ರನ್ ಗಳಿಸಿತ್ತು. ರಾಯಲ್ಸ್​ ಟಾಪ್​ ಅರ್ಡರ್​​ ಬ್ಯಾಟ್ಸ್​​​​ಮನ್​ಗಳು ಸಂಘಟಿತ ಹೋರಾಟ ತೋರಿದ್ದರು. ಜಾಸ್​ ಬಟ್ಲರ್​ 32 ಎಸೆತಗಳಲ್ಲಿ 41 ರನ್​ಗಳಿಸಿದರೆ, ಯಶಸ್ವಿ ಜೈಸ್ವಾಲ್​ 20 ಎಸೆತಗಳಲ್ಲಿ 32 ರನ್​, ನಾಯಕ ಸಂಜು ಸ್ಯಾಮ್ಸನ್​ 27 ಎಸೆತಗಳಲ್ಲಿ 5 ಬೌಂಡರಿ ಸಮೇತ 42 ರನ್​​ ಹಾಗೂ ಶಿವಂ ದುಬೆ 31 ಎಸೆತಗಳಲ್ಲಿ 35 ರನ್​ ಗಳಿಸಿ ಜವಾಬ್ದಾರಿಯುತ ಇನ್ನಿಂಗ್ಸ್​​ ಆಡಿದ್ದರು.

The post ಡಿ ಕಾಕ್​ ಶೈನಿಂಗ್​- ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈಗೆ 7 ವಿಕೆಟ್​​ ಗೆಲುವು appeared first on News First Kannada.

Source: newsfirstlive.com

Source link