ಡಿ.ಕೆ ಶಿವಕುಮಾರ್​ಗೆ ಇನ್ನೂ ವಯಸ್ಸಿದ್ದು, ಸಿದ್ದರಾಮಯ್ಯ ಸಿಎಂ ಆಗಲಿ: ರಾಮಪ್ಪ

ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ಭುಗಿಲೆದ್ದಿರುವ ಸಿಎಂ ಕೂಗು ಮತ್ತಷ್ಟು ಹೆಚ್ಚಿದೆ. ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪರ ಮತ್ತೊಬ್ಬ ಶಾಸಕ ಬ್ಯಾಟಿಂಗ್ ಮಾಡಿದ್ದಾರೆ. 2023ಕ್ಕೆ ಸಿದ್ದರಾಮಯ್ಯನವರೆ ಮುಖ್ಯಮಂತ್ರಿ ಆಗಬೇಕು ಎಂದು ಹರಿಹರ ಶಾಸಕ ರಾಮಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಗೆ ಇನ್ನೂ ವಯಸ್ಸಿದೆ. ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆಗೆ ಕ್ಯಾರೆ ಅನ್ನದ ಕಾಂಗ್ರೆಸ್ ಶಾಸಕರುಗಳು ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಹರಿಹರ ಶಾಸಕ ರಾಮಪ್ಪ ಹೇಳಿದ್ದಾರೆ.ರಾಜ್ಯದ ಜನರ ಅಭಿಪ್ರಾಯ ಇದೇ ಆಗಿದೆ. ನಮ್ಮ ಶಾಸಕರ ಅಭಿಪ್ರಾಯವೂ ಇದೇ ಆಗಿದೆ ಎಂದರು. ಇದನ್ನೂ ಓದಿ: ಹೋಟೆಲ್, ರೆಸಾರ್ಟ್, ವಸತಿ ಗೃಹಗಳ ವಿದ್ಯುತ್, ನೀರಿನ ಬಿಲ್ ಮನ್ನಾ ಮಾಡಿ: ಸಿದ್ದರಾಮಯ್ಯ ಪತ್ರ

ಡಿ.ಕೆ.ಶಿವಕುಮಾರ್ ಅವರಿಗೆ ಇನ್ನೂ ವಯಸ್ಸಿದೆ. ಅವರು ಮುಂದೆ ಬೇಕಾದರೆ ಸಿಎಂ ಆಗಬಹುದು. 2023 ಕ್ಕೆ ಸಿದ್ದರಾಮಯ್ಯನವರೇ ಸಿಎಂ ಆಗಬೇಕು. ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅದಕ್ಕೆ ಅವರೇ ಆದರೆ ಒಳ್ಳೆಯದು ಎಂಬುದು ನಮ್ಮ ಆಸೆ. ಇದರ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ. ಡಿ.ಕೆ.ಶಿವಕುಮಾರ್ ಗೆ ಇನ್ನೂ ವಯಸ್ಸಿದೆ. ಅವರೋ ಅಥವಾ ಬೇರೆಯವರೋ ಮುಂದೆ ಆಗಬಹುದು. ಈಗ 2023 ಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ.

The post ಡಿ.ಕೆ ಶಿವಕುಮಾರ್​ಗೆ ಇನ್ನೂ ವಯಸ್ಸಿದ್ದು, ಸಿದ್ದರಾಮಯ್ಯ ಸಿಎಂ ಆಗಲಿ: ರಾಮಪ್ಪ appeared first on Public TV.

Source: publictv.in

Source link