ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷ 100 ಕೋಟಿಗಳಿಗೆ ವ್ಯಾಕ್ಸಿನ್ ಖರೀದಿಸಿ ಜನರಿಗೆ ವ್ಯಾಕ್ಸಿನ್ ನೀಡುವುದಾಗಿ ಹೇಳಿದ್ದು ಇದಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ ಕೇಳಿದೆ. ಅಲ್ಲದೇ ಅನುಮತಿ ನೀಡುವಂತೆ ಸೋಷಿಯಲ್ ಮೀಡಿಯಾದಲ್ಲಿ #LetCongressVaccinate ಎಂಬ ಹ್ಯಾಷ್​ಟ್ಯಾಗ್ ಬಳಸಿ ದೊಡ್ಡ ಮಟ್ಟದ ಅಭಿಯಾನವನ್ನೂ ನಡೆಸಿದೆ.

ಈ ಮಧ್ಯೆ ಟ್ವೀಟ್ ಒಂದನ್ನು ಮಾಡಿದ ಕರ್ನಾಟಕ ಕಾಂಗ್ರೆಸ್​ನ ಅಧಿಕೃತ ಖಾತೆ ಟ್ವೀಟರ್​ ಖಾತೆಯಲ್ಲಿ, ಡಿ.ಕೆ. ಶಿವಕುಮಾರ್ ಸಿಎಂ ಆಗಿದ್ದಿದ್ರೆ ರಾಜ್ಯದ ಪರಿಸ್ಥಿತಿ ಕಂಟ್ರೋಲ್​​ನಲ್ಲಿ ಇರುತ್ತಿತ್ತು ಎಂದು ಬರೆದುಕೊಂಡಿತ್ತು. ಆದ್ರೆ ಟ್ವೀಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ ಕರ್ನಾಟಕ ಕಾಂಗ್ರೆಸ್ ಈ ಟ್ವೀಟ್​ ತೆಗೆದುಹಾಕಿದೆ.

ಕಾಂಗ್ರೆಸ್​ನಲ್ಲಿ ಈಗಾಗಲೇ ನಾಯಕತ್ವದ ಕಚ್ಚಾಟ ನಡೆಯುತ್ತಿದೆ ಎಂಬ ಚರ್ಚೆ ರಾಜಕೀಯ ಪಡಸಾಲೆಯನ್ನೇರಿದೆ. ಇದರ ನಡುವೆಯೇ ಕರ್ನಾಟಕ ಕಾಂಗ್ರೆಸ್​​ನ ಈ ಟ್ವೀಟ್​ನ ಪೋಸ್ಟ್ ಡಿಲೀಟ್​​ನ ಆಟ ಚರ್ಚೆಗೆ ಮತ್ತಷ್ಟು ಕಾವು ಕೊಟ್ಟಿದೆ.

The post ‘ಡಿ.ಕೆ.ಶಿವಕುಮಾರ್ ಈಗ ಸಿಎಂ ಆಗಿದ್ದಿದ್ರೆ..’ ಟ್ವೀಟ್ ಮಾಡಿ ಡಿಲೀಟ್​ ಮಾಡಿದ ಕಾಂಗ್ರೆಸ್ appeared first on News First Kannada.

Source: newsfirstlive.com

Source link