ಡಿ ಗ್ರೂಪ್​ ನೌಕರರ ಸಂಘದ ಅಧ್ಯಕ್ಷನಿಂದ ಸೈಟ್​ ವಂಚನೆ; ಒಂದೇ ನಿವೇಶನ ಹಲವರಿಗೆ ಮಾರಾಟ! | Crime News Bengaluru Fraud Case Karnataka Police complaint registered


ಡಿ ಗ್ರೂಪ್​ ನೌಕರರ ಸಂಘದ ಅಧ್ಯಕ್ಷನಿಂದ ಸೈಟ್​ ವಂಚನೆ; ಒಂದೇ ನಿವೇಶನ ಹಲವರಿಗೆ ಮಾರಾಟ!

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಡಿ ಗ್ರೂಪ್​ ನೌಕರರ ಸಂಘದ ಅಧ್ಯಕ್ಷನಿಂದ ಸೈಟ್​ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ನಟರಾಜ್​ ವಿರುದ್ಧ 100ಕ್ಕೂ ಹೆಚ್ಚು ದೂರು ದಾಖಲು ಆಗಿರುವುದು ತಿಳಿದುಬಂದಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ನಟರಾಜ್​ನಿಂದ ಮೋಸಹೋದವರಿಂದ ಸಾಲು ಸಾಲು ದೂರು ದಾಖಲಾಗಿದೆ. ಸರ್ವೆ ನಂಬರ್, ಶೆಡ್ಯೂಲ್​ ಬದಲಾಯಿಸಿ ಹಲವರಿಗೆ ಮಾರಾಟ ಮಾಡಿರುವ ವಿಚಾರ ಬಯಲಾಗಿದೆ.

75 ಎಕರೆ ಭೂಮಿಯಲ್ಲಿ ಸೈಟ್​ ಮಾಡಿ ಮಾರಿದ್ದ ನಟರಾಜ್​, ಒಂದೇ ನಿವೇಶನ ಹಲವರಿಗೆ ಮಾರಾಟ ಮಾಡಿದ್ದ ಎಂದು ತಿಳಿದುಬಂದಿದೆ. ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ನಟರಾಜ್​ನಿಂದ ಮೋಸಹೋದವರಿಂದ ಸಾಲು ಸಾಲು ದೂರು ದಾಖಲಾಗಿದ್ದು, ಇದೀಗ ಆತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ವರ್ಕ್ ಫ್ರಮ್ ಹೋಮ್ ಕೆಲಸ ನೀಡುವುದಾಗಿ ವಂಚನೆ
ವರ್ಕ್ ಫ್ರಮ್ ಹೋಮ್ ಕೆಲಸ ನೀಡುವುದಾಗಿ ವಂಚನೆ ಮಾಡಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿನ ದಕ್ಷಿಣ ವಿಭಾಗ, ಆಗ್ನೇಯ ವಿಭಾಗ ಸೈಬರ್ ಠಾಣೆಗಳಲ್ಲಿ‌ FIR ದಾಖಲಾಗಿದೆ. ಆಗ್ನೇಯ ಸಿಇಎನ್ ಠಾಣೆಗೆ ಪುನೀತ್ ಪೊನ್ನಪ್ಪರಿಂದ ದೂರು ದಾಖಲು ಆಗಿದೆ. ಇ- ಕಾಮರ್ಸ್‌ ಕಂಪನಿ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿತ್ತು. ಪುನೀತ್ ಪೊನ್ನಪ್ಪಗೆ 5 ಲಕ್ಷ 54 ಸಾವಿರ ರೂ. ವಂಚನೆ ಮಾಡಿತ್ತು ಎಂದು ತಿಳಿದುಬಂದಿದೆ.

ದಕ್ಷಿಣ ಸಿಇಎನ್ ಠಾಣೆಯಲ್ಲಿ ಹರ್ಷವರ್ಧನ್‌ರಿಂದ ದೂರು ದಾಖಲಾಗಿದೆ. ಅಮೆಜಾನ್‌ನಿಂದ ಪಾರ್ಟ್ ಟೈಮ್ ಜಾಬ್ ಕೆಲಸದ ಆಮಿಷ ಒಡ್ಡಲಾಗಿತ್ತು. ಹರ್ಷವರ್ಧನ್‌ಗೆ 5 ಲಕ್ಷ 41 ಸಾವಿರ ರೂಪಾಯಿ‌ ವಂಚನೆ ಮಾಡಲಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಎರಡೂ ಠಾಣೆಗಳಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಲಾಗಿದೆ.

ಶಿವಮೊಗ್ಗ: ಬೈಕ್‌ಗೆ ಬೆಂಕಿ ಹಚ್ಚಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಬೈಕ್‌ಗೆ ಬೆಂಕಿ ಹಚ್ಚಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ದುರ್ಘಟನೆ ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಗ್ರಾಮದ ಬಳಿ ನಡೆದಿದೆ. ಹಾರನಹಳ್ಳಿಯ ರಫೀಕ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಮಾಡಲಾಗಿದೆ. ಗಾಯಾಳು ರಫೀಕ್‌ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ವಂಚನೆ ಪ್ರಕರಣ: ರೈತನ ಖಾತೆಯಿಂದ 2 ಕೋಟಿ ರೂ. ಅಕ್ರಮ ವಹಿವಾಟು; 40 ಲಕ್ಷ ತೆರಿಗೆ ಕಟ್ಟಲು ರೈತನಿಗೆ ನೋಟಿಸ್

ಇದನ್ನೂ ಓದಿ: ಹಳೆ ಛಾಪಾಕಾಗದ ಮಾರಾಟ ಮಾಡ್ತಿದ್ದವರ ಮನೆ ಮೇಲೆ ಪೊಲೀಸರ ದಾಳಿ; ಸಾಕಷ್ಟು ಅಪರಾಧ ಕೃತ್ಯ ಬೆಳಕಿಗೆ

TV9 Kannada


Leave a Reply

Your email address will not be published. Required fields are marked *