
ಇಂಡಿ ತಾಲೂಕು ಆಸ್ಪತ್ರೆಯ ಅಧೀಕ್ಷಕ ಶಿವಾನಂದ ದೇವರ ಅಮಾನತು
ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರೋ ಡಿ ದರ್ಜೆ ನೌಕರರ ಬಳಿ ಲಂಚ ಸ್ವೀಕಾರ ಮಾಡಿದ್ದ ಅರೋಪ ಸಾಬೀತಾದ ಕಾರಣ ಇಂಡಿ ತಾಲೂಕಾ ಆಸ್ಪತ್ರೆಯ ಕಚೇರಿ ಅಧೀಕ್ಷಕ ಶಿವಾನಂದ ದೇವರನ್ನ ಡಿಹೆಚ್ಒ ಡಾ ರಾಜಕುಮಾರ ಯರಗಲ್ ಅಮಾನತ್ತು ಆದೇಶ ಜಾರಿ ಮಾಡಿದ್ದಾರೆ.
ವಿಜಯಪುರ: ಇಂಡಿ ತಾಲೂಕು ಆಸ್ಪತ್ರೆಯ ಕಚೇರಿ ಅಧೀಕ್ಷಕ ಶಿವಾನಂದ ದೇವರನ್ನು ಅಮಾನತುಗೊಳಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರೋ ಡಿ ದರ್ಜೆ ನೌಕರರ ಬಳಿ 1 ಲಕ್ಷ ರೂಪಾಯಿ ಲಂಚ ಪಡೆದಿದ್ದ ಆರೋಪ ಸಾಬೀತಾದ ಹಿನ್ನೆಲೆ ಸೇವೆಯಿಂದ ಅಮಾನತು ಮಾಡಿ ಡಿಹೆಚ್ಒ ಆದೇಶ ಹೊರಡಿಸಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರೋ ಡಿ ದರ್ಜೆ ನೌಕರರ ಬಳಿ ಲಂಚ ಸ್ವೀಕಾರ ಮಾಡಿದ್ದ ಅರೋಪ ಸಾಬೀತಾದ ಕಾರಣ ಇಂಡಿ ತಾಲೂಕಾ ಆಸ್ಪತ್ರೆಯ ಕಚೇರಿ ಅಧೀಕ್ಷಕ ಶಿವಾನಂದ ದೇವರನ್ನ ಡಿಹೆಚ್ಒ ಡಾ ರಾಜಕುಮಾರ ಯರಗಲ್ ಅಮಾನತ್ತು ಆದೇಶ ಜಾರಿ ಮಾಡಿದ್ದಾರೆ. 2020-21 ರ ಕೊರೊನಾ ರಿಸ್ಕ್ ಅಲೈನ್ಸ್ ಹಣ ನೀಡಲು ಡಿ ದರ್ಜೆಯ 9 ಜನ ನೌಕರರಿಂದ ಒಂದು ಲಕ್ಷ ರೂಪಾಯಿ ಲಂಚ ಪಡೆದಿದ್ದರು. ಈ ಆರೋಪ ಕುರಿತು ಇಂಡಿ ಉಪ ವಿಭಾಗಾಧಿಕಾರಿಗಳಿಗೆ ತನಿಖೆ ನಡೆಸಲು ಡಿಸಿ ವಿಜಯ ಮಹಾಂತೇಶ ದಾನಮ್ಮನವರು ಸೂಚಿಸಿದ್ದರು. ಎಸಿ ನೇತೃತ್ವದಲ್ಲಿ ತನಿಖೆಯಲ್ಲಿ ಆರೋಪ ಸಾಬೀತಾಗಿದೆ. ಡಿ ದರ್ಜೆ ನೌಕರರಿಂದ ಪೋನ್ ಪೇ ಹಾಗೂ ಬ್ಯಾಂಕ್ ಅಕೌಂಟ್ ಮೂಲಕ ಅಧಿಕಾರಿ ಶಿವಾನಂದ ಹಣ ಪಡೆದಿದ್ದಾರೆ. ತಮ್ಮ ಹಣ ವಾಪಸ್ ಕೇಳಿದ್ದ ನೌಕರರ ವಿರುದ್ದ ಜಾತಿನಿಂದನೆ ಕೇಸ್ ಹಾಕೋದಾಗಿ ಬೆದರಿಕೆ ಹಾಕಿದ್ದರು ಎಂಬುವುದು ಕೂಡ ತನಿಖೆ ವೇಳೆ ಸಾಬೀತಾಗಿದೆ. ಡಿಎಚ್ಓ ರಾಜಕುಮಾರ ಯರಗಲ್ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಧೀಕ್ಷಕ ಶಿವಾನಂದ ದೇವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಜಾರಿ ಮಾಡಿದ್ದಾರೆ.