ಗುಜರಾತ್: ದೇಶಾದ್ಯಂತ ಒಮಿಕ್ರಾನ್ ಆತಂಕದ ಹಿನ್ನಲೆ, ಎಲ್ಲೆಡೆ ಲಸಿಕೆ ಅಭಿಯಾನವನ್ನ ಚುರುಕುಗೊಳಿಸಲಾಗಿದೆ. ಆದ್ರೆ ಈಗಲೂ ಸಹ ಕೆಲ ರಾಜ್ಯದ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅಂತ್ರದ್ದಲ್ಲಿ ಅಹಮದಾಬಾದ್ ನಗರಸಭೆ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಇದುವರೆಗೆ ಲಸಿಕೆ ಯಾರು ಪಡೆದಿಲ್ಲವೋ ಸದ್ಯ ಅಂತವರ ಮನವೊಲಿಸುವುದಕ್ಕಾಗಿ ಗುಜರಾತ್ನ ಅಹಮದಾಬಾದ್ ನಗರಸಭೆ ಲಕ್ಕಿ ಡ್ರಾ ಘೋಷಣೆ ಮಾಡಿದೆ. ಈ ಮೂಲಕ ಎರಡೂ ಡೋಸ್ ಲಸಿಕೆ ಪಡೆದ ವ್ಯಕ್ತಿಗೆ 60 ಸಾವಿರ ರೂಪಾಯಿ ಬೆಲೆ ಬಾಳುವ ಸ್ಮಾರ್ಟ್ಫೋನ್ ನೀಡುವುದಾಗಿ ಘೋಷಿಸಿದೆ. ಈ ತಿಂಗಳ 7ನೇ ತಾರಿಖಿನ ಒಳಗೆ ಎರಡು ಡೋಸ್ ಲಸಿಕೆ ಪಡೆದ ಜನರು ಈ ಲಕ್ಕಿ ಡ್ರಾ ಪಡೆಯಲು ಅರ್ಹರು ಅಂತ ನಗರಸಭೆ ತಿಳಿಸಿದೆ.