ಬೆಂಗಳೂರು: ಹಿರಿಯ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ನ್ಯೂಸ್ಫಸ್ಟ್ಗೆ ಶಿವರಾಂ ಪುತ್ರ ಲಕ್ಷ್ಮೀಶ್ ಮಾಹಿತಿ ನೀಡಿದ್ದಾರೆ.
ತಂದೆಯವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಲಕ್ಷ್ಮೀಶ್ ಅವರು, ಈಗಿನ ಸಂದರ್ಭದಲ್ಲಿ ಏನನ್ನೂ ಹೇಳಲು ಆಗಲ್ಲ, ಪರಿಸ್ಥಿತಿ ಗಂಭೀರವಾಗಿದೆ. ಎಲ್ಲವನ್ನೂ ದೇವರ ಮೇಲೆ ಭಾರ ಹಾಕಿದ್ದೀವಿ. ಪವಾಡ ನಡೆಯಬಹುದು ಅಂತ ಕಾಯ್ತಾ ಇದ್ದೀವಿ. ಅವರ ಮೆದುಳಿಗೆ ಪೆಟ್ಟು ಬಿದ್ದಿದ್ದು, ವೈದ್ಯರು ಸರ್ಜರಿ ಮಾಡಲು ಅವರ ವಯಸ್ಸು ಸಹಕರಿಸುತ್ತಿಲ್ಲ ಎಂದಿದ್ದಾರೆ.
ನಮ್ಮ ತಂದೆ ಆರೋಗ್ಯವಾಗಿಯೇ ಇದ್ದರು. ಆದರೆ ಮೊನ್ನೆ ಮನೆಯಲ್ಲೇ ಬಿದ್ದ ನಂತರ ಆಸ್ಪತ್ರೆಗೆ ದಾಖಲಿಸಿದ್ದೇವು. ಸತತ ಕಾರ್ಯಕ್ರಮಗಳಿಂದ ಅವರು ಬಳಲಿದ್ದರು. ಬೀಳುವ ಹಿಂದಿನ ದಿನ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೆಲಸದ ಒತ್ತಡದ ನಡುವೆ ಊಟ, ನಿದ್ದೆ ಮಾಡುತ್ತಿರಲಿಲ್ಲ. ವೈದ್ಯರು ಸರಿಯಾಗಿ ಊಟ, ನಿದ್ದೆ ಮಾಡಲು ಸಲಹೆ ನೀಡಿದ್ದರು. ಇಡೀ ವರ್ಷ ಅಯ್ಯಪ್ಪ ಸ್ವಾಮಿ ವ್ರತದಲ್ಲಿರುತ್ತಿದ್ದರು. ಇದೇ ಡಿ.8 ರಂದು ಶಬರಿಮಲೆಗೆ ಹೋಗುವ ವಿಚಾರದಲ್ಲಿದ್ದರು ಆದರೆ ಆ ವೇಳೆ ಈ ರೀತಿ ಆಯ್ತು ಎಂದು ತಿಳಿಸಿದರು.
ಶಬರಿಮಲೆಯಲ್ಲೇ ತಪಸ್ಸು ಮಾಡೋ ಇಚ್ಛೆ ಇತ್ತು..
ಇಡೀ ವರ್ಷ ಡೀ ವರ್ಷ ಅಯ್ಯಪ್ಪ ಸ್ವಾಮಿ ವ್ರತದಲ್ಲಿರುತ್ತಿದ್ದ ಅಪ್ಪನಿಗೆ, ಒಂದು ತಿಂಗಳು ಸಂಪೂರ್ಣವಾಗಿ ದೇವರ ಸೇವೆ ಮಾಡ್ತಾ ತಪಸ್ಸು ಮಾಡಲು ಇಚ್ಛೆ ಹೊಂದಿದ್ದರು. ಇಡೀ ವಿಶ್ವದಿಂದಲೇ ಕೊರೊನಾ ದೂರ ಆಗಬೇಕು ಅನ್ನೋ ಉದ್ದೇಶವನ್ನು ಹೊಂದಿದ್ದರು. ನಾನು ಬದುಕಿರುವುದೇ ಬೇರೆಯವರ ಸೇವೆ ಮಾಡಲು ಇದ್ದೀನಿ ಅಂತ ಹೇಳುತ್ತಿದ್ದರು. ಈ ದೇವರಲ್ಲಿ ಅವರ ಆರೋಗ್ಯಕ್ಕೆ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.