ಭಾರತವೇ ಅಭಿವೃದ್ಧಿ ಪಡಿಸಿ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್​ಗೆ ಈಗ ಅಮೆರಿಕಾ ಕೂಡ ಸೆಲ್ಯೂಟ್ ಹೊಡೆದಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಜಂಟಿಯಾಗಿ ಕೊವ್ಯಾಕ್ಸಿನ್ ಅನ್ನು ಕಂಡು ಹಿಡಿದಿದ್ದವು. ಸದ್ಯ ಈ ವ್ಯಾಕ್ಸಿನ್​ ಅನ್ನು ಭಾರತ್ ಬಯೋಟೆಕ್ ಉತ್ಪಾದಿಸುತ್ತಿದ್ದು ಕನಿಷ್ಠ 1 ಕೋಟಿ ಭಾರತೀಯ ಈ ವ್ಯಾಕ್ಸಿನ್​ನ ಒಂದು ಡೋಸ್​​​ನಾದ್ರೂ ಪಡೆದಿದ್ದಾರೆ.

ಈ ಬಗ್ಗೆ ಮಾತನಾಡುತ್ತಿದ್ದ ಅಮೆರಿಕಾ ಅಧ್ಯಕ್ಷರ ಅಧಿಕೃತ ನಿವಾಸ ಹಾಗೂ ಕಚೇರಿ ವೈಟ್​ಹೌಸ್​ನ ಮುಖ್ಯ ಆರೋಗ್ಯ ಸಲಹೆಗಾರರಾಗಿರುವ ಡಾ. ಆಂಥೋಣಿ ಫೌಸಿ, ಭಾರತದಲ್ಲಿ ನೀಡಲಾಗ್ತಿರೋ ಕೊವ್ಯಾಕ್ಸಿನ್ ಡೆಡ್ಲಿ ಮ್ಯೂಟಂಟ್ ಕೊರೊನಾ B.617 ಅನ್ನು ಮಟ್ಟ ಹಾಕುವ ಗುಣ ಹೊಂದಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಈ ವ್ಯಾಕ್ಸಿನ್ ಪ್ರಮುಖ ಪಾತ್ರವಹಿಸಲಿದ್ದು, ರೂಪಾಂತರಿ ಕೊರೊನಾ ವೈರಸ್​ಗೂ ಇದು ಪ್ರಮುಖ ಆ್ಯಂಟಿಟೋಡ್ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಸಾಂಕ್ರಾಮಿಕ ರೋಗಗಳ ತಜ್ಞರೂ ಆಗಿರುವ ಡಾ.ಫೌಸಿ, ನಾವು ಇನ್ನೂ ಎಲ್ಲ ಡೇಟಾ ಸಂಗ್ರಹಿಸುತ್ತಿದ್ದೇವೆ. ಇತ್ತೀಚೆಗೆ ಕೊವ್ಯಾಕ್ಸಿನ್ ಪಡೆದವರ ಡೇಟಾ ಕೂಡ ಪಡೆದಿದ್ದೇವೆ. ಈ ಡೇಟಾ ಅಧ್ಯಯನ ನಡೆಸಿದಾಗ ನಮಗೆ ಪ್ರಮುಖ ಮಾಹಿತಿ ಲಭ್ಯವಾಗಿದ್ದು, ರೂಪಾಂತರಿ ಕೊರೊನಾ ವೈರಸ್​ಗೆ ಕೊವ್ಯಾಕ್ಸಿನ್​ ರಾಮಬಾಣವಾಗಿದೆ ಎಂದು ತಿಳಿಸಿದ್ದಾರೆ. ಡಾ. ಫೌಸಿ ಹೇಳಿಕೆಯಿಂದ ಕೊವ್ಯಾಕ್ಸಿನ್​ ಬ್ರಾಂಡ್​ಗೆ ಆನೆ ಬಲ ಬಂದಂತಾಗಿದೆ. ಇನ್ನು ಮೇ 1, 2021ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಭಾರತದಲ್ಲಿ ವ್ಯಾಕ್ಸಿನ್ ನೀಡಲು ಅನುಮತಿ ನೀಡಲಾಗಿದ್ದು, ಇಂದು ಸಂಜೆ 4 ಗಂಟೆಯಿಂದ  https://www.cowin.gov.in/ ವೆಬ್​ಸೈಟ್​ನಲ್ಲಿ ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.

The post ಡೆಡ್ಲಿ ರೂಪಾಂತರಿ ಕೊರೊನಾ ಇಲ್ಲವಾಗಿಸುತ್ತೆ ಕೊವ್ಯಾಕ್ಸಿನ್ – ಭಾರತದ ವ್ಯಾಕ್ಸಿನ್​​ಗೆ ಡಾ.ಫೌಸಿ ಸೆಲ್ಯೂಟ್ appeared first on News First Kannada.

Source: newsfirstlive.com

Source link